ಶೌಚಾಲಯದಲ್ಲಿ ವಾಸ

ಗುರುವಾರ , ಜೂನ್ 27, 2019
26 °C
ಕೇಂದ್ರಾಪರ ಜಿಲ್ಲೆಯಲ್ಲಿ ದಲಿತ ಕುಟುಂಬದ ಶೋಚನೀಯ ಸ್ಥಿತಿ

ಶೌಚಾಲಯದಲ್ಲಿ ವಾಸ

Published:
Updated:

ಕೇಂದ್ರಾಪರ: ಚಂಡಮಾರುತ ಫೋನಿ ಅಬ್ಬರಕ್ಕೆ ಮನೆ ಕಳೆದುಕೊಂಡ ದಲಿತ ಕುಟುಂಬ ಅನಿವಾರ್ಯವಾಗಿ ಶೌಚಾಲಯದಲ್ಲಿ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ. 

ಮೇ 3ರಂದು ಫೋನಿ ಒಡಿಶಾಗೆ ಅಪ್ಪಳಿಸಿತ್ತು. ಬಿರುಗಾಳಿಗೆ ಕೇಂದ್ರಾಪರ ಜಿಲ್ಲೆಯ ರಾಘುದೈಪುರ್‌ ಹಳ್ಳಿಯ ದಿನಗೂಲಿ ನೌಕರ ಖಿರೋದ್ ಜೀನ ವಾಸಿಸುತ್ತಿದ್ದ ಕಚ್ಚಾ ಮನೆ ಕುಸಿದುಬಿದ್ದಿತ್ತು. ಆದರೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ನಿರ್ಮಾಣಗೊಳಿಸಿದ್ದ ಪಕ್ಕಾ ಶೌಚಾಲಯಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಮನೆ ಕಳೆದುಕೊಂಡ ಖಿರೋದ್ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜತೆ 6 ಅಡಿ ಅಗಲದ ಶೌಚಾಲಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. 

‘ಚಂಡ ಮಾರುತ ನನ್ನ ಜೀವನವನ್ನೇ ಛಿದ್ರ ಗೊಳಿಸಿದೆ. ಹೊಸ ಮನೆ ಕಟ್ಟಲು ಹಣವಿಲ್ಲ. 2 ವರ್ಷದ ಹಿಂದೆ ಮನೆಯ ಆವರಣದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಬೇರೆ ಯಾವ ಆಯ್ಕೆಯೂ ಇಲ್ಲದೇ ಇಲ್ಲೇ ವಾಸಿಸುತ್ತಿದ್ದೇವೆ. ಮನೆ ಕಟ್ಟಲು ಸರ್ಕಾರ ಪರಿಹಾರ ನೀಡುವವರೆಗೂ ಶೌಚಾಲಯವೇ ಮನೆಯಾಗಿರಲಿದೆ. ಬಹಿರ್ದೆಸೆಗೆ ಅನಿವಾರ್ಯವಾಗಿ ಬಯಲಿಗೆ ಹೋಗುತ್ತಿದ್ದೇವೆ’ ಎಂದು ಜೀನ ತಿಳಿಸಿದರು. 

‘ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಬಿಜು ಪಕ್ಕಾ ಮನೆ ಯೋಜನೆಯಡಿ ಮನೆ ನಿರ್ಮಿಸಲು ಧನಸಹಾಯ ಕೋರಿದ್ದೆ. ಆದರೆ ಈ ಧನಸಹಾಯ ದೊರಕಿರಲಿಲ್ಲ. ಪಕ್ಕಾ ಮನೆ ನಿರ್ಮಾಣವಾಗಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ಜೀನ ಮರುಗಿದರು.  

***

ದಲಿತ ಕುಟುಂಬವೊಂದು ಶೌಚಾಲಯದಲ್ಲಿ ವಾಸಿಸುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರ ಪರಿಹಾರ ಮತ್ತು ಗೃಹ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.
–ದಿಲೀಪ್ ಕುಮಾರ್‌ ಪರಿದ, ಯೋಜನಾ ನಿರ್ದೇಶಕ, ಡಿಆರ್‌ಡಿಎ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !