ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಕ್, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ: ಇಂದಿನಿಂದ ಅಧಿಕೃತ ಆಡಳಿತ ಆರಂಭ

Last Updated 31 ಅಕ್ಟೋಬರ್ 2019, 14:02 IST
ಅಕ್ಷರ ಗಾತ್ರ

ನವದೆಹಲಿ:ಭಾರತದಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌‌ಗಳಲ್ಲಿ ಗುರುವಾರದಿಂದಆಡಳಿತಾತ್ಮಕ ಕೆಲಸ ಆರಂಭವಾಗಿದ್ದು ಗಿರೀಶ್ ಚಂದ್ರ ಮುರ್ಮು ಅವರು ಜಮ್ಮು ಮತ್ತು ಕಾಶ್ಮೀರದ ಪ್ರಥಮಲೆಫ್ಟಿನೆಂಟ್ ಗವರ್ನರ್ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಈ ಬೆಳವಣಿಗೆಯನ್ನು ಗಮನಿಸಿರುವ ಚೀನಾ, ಭಾರತ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾ‍ಡಿ ಆ ಮೂಲಕ ಚೀನಾ ಗಡಿಯನ್ನೂ ಆಕ್ರಮಿಸಿಕೊಂಡು ಕಾನೂನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ಈ ಸಂಬಂಧ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶೌಂಗ್ ಸುದ್ದಿಗೋಷ್ಠಿ ನಡೆಸಿದ್ದು, ಚೀನಾ ಆಡಳಿತಕ್ಕೆ ಒಳಪಡುವ ಪ್ರದೇಶದಲ್ಲಿ ಭಾರತ ತನ್ನ ಗಡಿಯನ್ನು ಹೊಂದಿರುವುದಾಗಿ ಪ್ರಕಟಿಸಿರುವುದು ಕಾನೂನು ಉಲ್ಲಂಘನೆ. ಭಾರತದ ಈ ಕ್ರಮವನ್ನು ಚೀನಾ ವಿರೋಧಿಸುತ್ತದೆ. ಅಲ್ಲದೆ, ಮರುಕ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ಭಾರತ ತನ್ನ ಆಂತರಿಕ ಕಾನೂನು ಹಾಗೂ ಆಡಳಿತಾತ್ಮಕ ವಿಭಾಗಗಳನ್ನಾಗಿ ಏಕಪಕ್ಷೀಯವಾಗಿ ಬದಲಾಯಿಸಿರುವುದು ಚೀನಾದ ಸಾರ್ವಭೌಮತ್ವಕ್ಕೆ ಸವಾಲೆಸೆದಿದೆ. ಇದರಿಂದ ಯಾವುದೇ ಪ್ರಯೋಜನವಾಗದು ಎಂದಿದ್ದಾರೆ.

ಭಾರತ-ಚೀನಾ ನಡುವೆ ಆಗಿರುವ ಒಪ್ಪಂದಗಳನ್ನು ಪಾಲಿಸಿ, ಗಡಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ಆ ಮೂಲಕ ಅನುಕೂಲಕರ ವಾತಾವರಣ ಸೃಷ್ಟಿಸಿ ಗಡಿಯಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT