ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲ ನಡೆಯದು’

ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ ಆಘಾಡಿ ಮೈತ್ರಿಕೂಟದ ನಾಯಕರ ವಿಶ್ವಾಸ
Last Updated 11 ಮಾರ್ಚ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸುರಕ್ಷಿತವಾಗಿದ್ದು,ರಾಜ್ಯದಲ್ಲಿ ‘ಆಪರೇಷನ್ ಕಮಲ’ ಯಶಸ್ವಿಯಾಗುವುದಿಲ್ಲ ಎಂದು ಮಹಾವಿಕಾಸ ಅಘಾಡಿ ಮೈತ್ರಿಕೂಟದ ನಾಯಕರು ಬುಧವಾರ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನದ ಅಂಚಿಗೆ ತಲುಪಿರುವ ಸಮಯದಲ್ಲಿ, ಮೈತ್ರಿ ಕೂಟದ ನಾಯಕರು ಈ ಹೇಳಿಕೆ ನೀಡಿ ದ್ದಾರೆ.ಬಿಜೆಪಿ ನಾಯಕರ ಎರಡು ಹೇಳಿಕೆಗಳು ಹಾಗೂಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಬೆಳವಣಿಗೆಯು ಮಹಾರಾಷ್ಟ್ರದಲ್ಲಿ ಭೀತಿ ಸೃಷ್ಟಿಸಿವೆ.

‘ಮಹಾರಾಷ್ಟ್ರದಲ್ಲಿಯೂ ಹಿಂದುತ್ವ ಮರುಕಳಿಸಲಿದ್ದು, ಮತ್ತೆ ಆಳ್ವಿಕೆ ಶುರುವಾಗಲಿದೆ ಎಂದು ನನಗೆ ಅನಿಸುತ್ತಿದೆ. ಇದಕ್ಕೆ ಸಮಯ ಕೂಡಿ ಬರಬೇಕಿದೆ’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

‘ಶಿವಸೇನಾ ಶಾಸಕರು ಅಸಂತೋಷ ಗೊಂಡಿದ್ದು, ರಾಜ್ಯದಲ್ಲಿ ರಾಜಕೀಯ ಕಂಪನ ಆಗುವ ಸಾಧ್ಯತೆಯಿದೆ’ ಎಂದು ಕೇಂದ್ರದಲ್ಲಿ ಸಚಿವರಾಗಿರುವ ಆರ್‌ಪಿ ಐನ ರಾಮದಾಸ ಆಠವಲೆ ಹೇಳಿದ್ದಾರೆ.

ಈ ಎರಡೂ ಹೇಳಿಕೆಗಳನ್ನು ಸೇನಾ–ಎನ್‌ಸಿಪಿ–ಕಾಂಗ್ರೆಸ್ ಮುಖಂಡರು ತಳ್ಳಿಹಾಕಿದ್ದಾರೆ. ಬಿಜೆಪಿಗೆ ತಿರುಗೇಟು ನೀಡಿರುವ ಸೇನಾ ಮುಖಂಡ ಸಂಜಯ್ ರಾವುತ್,‘ಮಧ್ಯಪ್ರದೇಶದ ವೈರಸ್ ಮಹಾರಾಷ್ಟ್ರವನ್ನು ಪ್ರವೇಶಿಸುವುದಿಲ್ಲ. ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಯತ್ನಿಸಿದ್ದರೂ ಅದು ಸಫಲವಾಗಲಿಲ್ಲ. ಅಂತಹ ಯಾವುದೇ ‘ಆಪರೇಷನ್’ ಇಲ್ಲಿ ಯಶಸ್ವಿಯಾಗುವುದಿಲ್ಲಎಂದು ಹೇಳಿದ್ದಾರೆ.

‘ಚುನಾವಣೆ ಸಮಯದಲ್ಲಿ ಶಿವ ಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದ್ದ ಮುಖಂಡರು ಮತ್ತೆ ಪಕ್ಷಗಳಿಗೆ ಮರ ಳಲು ಆಸಕ್ತರಾಗಿದ್ದಾರೆ. ಸರ್ಕಾರ ಸುಭದ್ರ ವಾಗಿದೆ’ ಎಂದು ಸಚಿವ, ಎನ್‌ಸಿಪಿ ವಕ್ತಾರ ನವಾಬ್ ಮಲಿಕ್‌ ಹೇಳಿದ್ದಾರೆ.

‘ಸರ್ಕಾರ ಬೀಳಿಸುವ ಯಾವುದೇ ಯತ್ನಗಳಿಗೆ ಮೈತ್ರಿಕೂಟದ ಮೂರೂ ಪಕ್ಷಗಳು ತಡೆ ಒಡ್ಡಲಿವೆ. ನಮ್ಮ ನಡುವೆ ಸಂಪೂರ್ಣ ಸಮನ್ವಯ ಇದೆ’ ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಸಚಿವ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ.

**

ಮಹಾರಾಷ್ಟ್ರದಲ್ಲಿ ಮಧ್ಯಪ್ರದೇಶದ ಸ್ಥಿತಿ ಇಲ್ಲ. ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ ಆಘಾಡಿ ಸರ್ಕಾರವು ಸುಭದ್ರವಾಗಿದೆ.


-ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ

**

ನನ್ನಂತಹ ‘ಸರ್ಜನ್‌’ಗಳು ಆಪರೇಷನ್ ಕೊಠಡಿಯಲ್ಲಿ ಇದ್ದೇವೆ. ಯಾರಾದರೂ ಆಪರೇಷನ್ ಮಾಡಲು ಬಂದರೆ, ಅವರಿಗೇ ಆಪರೇಷನ್ ಆಗುತ್ತದೆ.


-ಸಂಜಯ್ ರಾವುತ್,ಸೇನಾ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT