ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ, ವಿಪಕ್ಷ ಭಾವನೆ ಬಿಟ್ಟು, ನಿಷ್ಪಕ್ಷಪಾತವಾಗಿ ಕೆಲಸ ಮಾಡೋಣ-ಪ್ರಧಾನಿ ಮೋದಿ

Last Updated 17 ಜೂನ್ 2019, 6:46 IST
ಅಕ್ಷರ ಗಾತ್ರ

ನವದೆಹಲಿ: ವಿರೋಧಪಕ್ಷಗಳ ಪ್ರತಿಯೊಂದು ಪದವೂ ನಮಗೆ ಪ್ರಮುಖವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ತಿನ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಸಮರ್ಥರಿರಲಿ, ಸಮರ್ಥ ಇಲ್ಲದಿರಲಿ, ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ವಿರೋಧ ಪಕ್ಷಗಳು ಸಂಖ್ಯೆಗಳ ಚಿಂತೆ ಬಿಡಬೇಕು. ಇಲ್ಲಿ ಸಂಖ್ಯೆ ಮುಖ್ಯವಲ್ಲ, ನಮಗೆ ಜನರು ಬಹು ಸಂಖ್ಯೆ ನೀಡಿ ಆರಿಸಿ ಕಳುಹಿಸಿದ್ದಾರೆ. ಇಲ್ಲಿ ಪಕ್ಷ, ವಿಪಕ್ಷಗಳಿಗಿಂತ ನಿಷ್ಪಕ್ಷಪಾತ ಬಹಳ ಮುಖ್ಯವಾದುದು. ಪಕ್ಷ,ವಿಪಕ್ಷಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು.
ನಮಗೆ ನಿಮ್ಮ ಭಾವನೆ ಮುಖ್ಯ. ನಿಮ್ಮ ಒಂದು ಪದವೂ ಮುಖ್ಯವಾದದ್ದು, ಈ ಐದು ವರ್ಷದ ಅವಧಿಯಲ್ಲಿ ಎಲ್ಲರೂ ಒಟ್ಟಾಗಿ ಬಡವರನ್ನು, ಸಮಸ್ಯೆಯಿಂದ ಬಳಲುವ ಜನರನ್ನು ಸಮಸ್ಯೆಯಿಂದ ಮೇಲೆತ್ತುವ ಕೆಲಸ ಮಾಡೋಣ ಎಂದು ಹೇಳಿದರು.

ಪ್ರಮಾಣ ವಚನ ಸ್ವೀಕಾರ: ಪ್ರಧಾನಿ ನರೇಂದ್ರ ಮೋದಿಸಂಸತ್ತಿನ ಅಧಿವೇಶನಕ್ಕೂ ಮುನ್ನ ಸ್ಪೀಕರ್ ಅವರಿಂದ ಕರ್ತವ್ಯದ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿಯವರೊಂದಿಗೆ ಎಲ್ಲಾ ಸಂಸತ್ ಸದಸ್ಯರು ಸದಸ್ಯತ್ವದ ಪ್ರಮಾಣ ವಚನ ಸ್ವೀಕರಿಸಿದರು. ನಿತಿನ್ ಗಡ್ಕರಿ, ಸ್ಮೃತಿಇರಾನಿ ಸೇರಿದಂತೆ ಕೇಂದ್ರ ಎಲ್ಲಾ ಸಚಿವರು ಪ್ರಮಾಣ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT