‘ಶಾಂತಿ ಕದಡಲು ವಿಪಕ್ಷಗಳ ಯತ್ನ’

7
ಸಂತ ಕಬೀರ ದಾಸರ 500ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮೋದಿ ಆರೋಪ

‘ಶಾಂತಿ ಕದಡಲು ವಿಪಕ್ಷಗಳ ಯತ್ನ’

Published:
Updated:
ಸಂತ ಕಬೀರ ದಾಸರ ಸಮಾಧಿಗೆ ಪ್ರಧಾನಿ ಮೋದಿ ಹೂಮಾಲೆ ಅರ್ಪಿಸಿದರು

ಮಗಹರ್: ‘ವಿರೋಧ ಪಕ್ಷಗಳು ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿವೆ. ರಾಜಕೀಯ ಲಾಭಕ್ಕಾಗಿ ಮೈತ್ರಿಕೂಟ ರಚಿಸಿಕೊಳ್ಳುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಸಂತ ಕಬೀರ ದಾಸರ 500ನೇ ಪುಣ್ಯಸ್ಮರಣೆ ಅಂಗವಾಗಿ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

‘ತುರ್ತು ಪರಿಸ್ಥಿತಿಯನ್ನು ಹೇರಿದ್ದವರು ಮತ್ತು ಆಗ ಅದನ್ನು ವಿರೋಧಿಸಿದ್ದವರು ಎಲ್ಲರೂ ಈಗ ಪರಸ್ಪರ ಹೆಗಲು ಸವರಿಕೊಳ್ಳುತ್ತಾ ಜತೆಯಾಗಿ ನಡೆದು ಹೋಗುತ್ತಿದ್ದಾರೆ. ಅವರ ಅಧಿಕಾರ ಲಾಲಸೆ ಎಷ್ಟಿದೆ ಎಂಬುದನ್ನು ಅವರ ಈ ನಡೆ ತೋರಿಸುತ್ತದೆ. ಅಧಿಕಾರವನ್ನು ಕಸಿಯುವ ಅವಕಾಶಕ್ಕಾಗಿ ಅವರು ಹೊಂಚು ಹಾಕಿ‘ದ್ದಾರೆ’ ಎಂದು ಮೋದಿ ಟೀಕಿಸಿದರು.

‘ವಿರೋಧ ಪಕ್ಷದವರಿಗೆ ವಾಸ್ತವದ ಬಗ್ಗೆ ಅರಿವೇ ಇಲ್ಲ. ಸಂತ ಕಬೀರ, ಮಹಾತ್ಮ ಗಾಂಧಿ ಮತ್ತು ಬಾಬಾ ಅಂಬೇಡ್ಕರ್ ಅಂಥವರನ್ನು ಹೊಂದಿದ್ದ ಈ ದೇಶದ ನಾಡಿಮಿಡಿತವೇ ಅವರಿಗೆ ಗೊತ್ತಿಲ್ಲ ಎಂದರು.

‘ಕೀಳು ರಾಜಕಾರಣ’

‘ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ. ಹೀಗಾಗಿ ಬಿಜೆಪಿಗೆ ಸಂತ ಕಬೀರ ದಾಸರ ನೆನಪಾಗಿದೆ. ಕಬೀರರು ಜನರ ಮನಸ್ಸಿನಲ್ಲಿದ್ದಾರೆ. ಅವರನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಕೀಳು ರಾಜಕಾರಣವನ್ನು ಬಿಜೆಪಿ ಮಾಡಬಾರದು’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

**

ವಿರೋಧ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ ಸಮಾಜ ವನ್ನು ದುರ್ಬಲಗೊಳಿಸುತ್ತಿವೆ. ದೌರ್ಭಾಗ್ಯ ಗಳಿಂದ ಸಮಾಜಕ್ಕೆ ಬಿಡುಗಡೆ ಸಿಗುವುದು ಅವರಿಗೆ ಬೇಕಾಗಿಲ್ಲ
–ನರೇಂದ್ರ ಮೋದಿ, ಪ್ರಧಾನಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !