ಎನ್‍ಡಿಎ ಸರ್ಕಾರದ ಉತ್ತಮ ಕೆಲಸಗಳನ್ನು ನೋಡಿ ಕೆಲವರು ಹತಾಶೆಗೊಂಡಿದ್ದಾರೆ: ಮೋದಿ

7

ಎನ್‍ಡಿಎ ಸರ್ಕಾರದ ಉತ್ತಮ ಕೆಲಸಗಳನ್ನು ನೋಡಿ ಕೆಲವರು ಹತಾಶೆಗೊಂಡಿದ್ದಾರೆ: ಮೋದಿ

Published:
Updated:

ತಿರುಪ್ಪೂರ್: ಎನ್‍ಡಿಎ ಸರ್ಕಾರ ಉತ್ತಮ ಕೆಲಸಗಳು ಕೆಲವು ಜನರಿಗೆ ಬೇಸರವನ್ನುಂಟು ಮಾಡಿದೆ. ಅವರ ಈ ಬೇಸರ ಹತಾಶೆಗೆ ತಿರುಗಿದಾಗ ಅವರು ನನ್ನನ್ನು ನಿಂದಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ತಮಿಳುನಾಡಿನ ತಿರುಪ್ಪೂರ್‌ಗೆ ಬಂದಿಳಿದ ಮೋದಿ ಹಲವಾರು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿದ ನಂತರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಮೋದಿ ಭಾಷಣದ ಹೈಲೈಟ್ಸ್

* ನಾನು ತಿರುಪ್ಪೂರ್‌ನ ಈ ಮಣ್ಣಿಗೆ ನಮಸ್ಕರಿಸುತ್ತೇನೆ. ಇದು ಧೀರರ ನೆಲ, ರಾಷ್ಟ್ರ ಧ್ವಜಕ್ಕಾಗಿ ತಮ್ಮ ಪ್ರಾಣವನ್ನರ್ಪಿಸಿದ ತಿರುಪ್ಪೂರ್ ಕುಮಾರನ್ ಅವರ ನೆಲ ಇದು. ದೇಶಕ್ಕೆ ಧೀರತೆಯ ಪ್ರೇರಣೆ ನೀಡುವ ಧೀರನ್ ಚಿನ್ನಮಲೈ ಅವರ ನಾಡು ಎಂದು ಮೋದಿ ಭಾಷಣ ಆರಂಭಿಸಿದ್ದರು.

*  NaMo Again ಎಂಬ ಸಂದೇಶವಿರುವ ಟಿ-ಶರ್ಟ್, ನಮೋ ವಾಣಿಜ್ಯ ಸರಕುಗಳೆಲ್ಲಾ ತಿರುಪ್ಪೂರ್‌ನಲ್ಲಿಯೇ ತಯಾರಾಗುತ್ತವೆ ಎಂದಿದ್ದಾರೆ ಮೋದಿ.

*  ತಿರುಚ್ಚಿ ವಿಮಾನ ನಿಲ್ದಾಣದಲ್ಲಿ  ಇಂಟಗ್ರೇಟೆಡ್ ಕಟ್ಟಡವನ್ನು ಉದ್ಘಾಟಿಸಿದ ಮೋದಿ, ಈ ವಿಮಾನ ನಿಲ್ದಾಣದಲ್ಲಿ 3000 ಪ್ರಯಾಣಿಕರಿಗೆ ವ್ಯವಸ್ಥೆ  ಇದೆ ಎಂದಿದ್ದಾರೆ.

*  ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಅವರು,  ಕಾಂಗ್ರೆಸ್ ರಕ್ಷಣಾ ವಲಯದಲ್ಲಿ ಹಗರಣ ಮಾಡಿ ದೇಶಕ್ಕೆ ಹಾನಿಯುಂಟುಮಾಡಿದೆ.  ಕಾಂಗ್ರೆಸ್ ಭಾರತೀಯ ಸೇನೆಯನ್ನು ಅವಮಾನಿಸಿದೆ, ಅವರು ನಿರ್ದಿಷ್ಟ ದಾಳಿಯನ್ನೇ ಶಂಕಿಸಿದ್ದರು.

*  ಇತ್ತೀಚಿನ ಕೇಂದ್ರ ಬಜೆಟ್‍ನಲ್ಲಿ  ಪ್ರಧಾನ್ ಮಂತ್ರಿ ಶ್ರಮ್‍ಯೋಗಿ ಮನ್ ಧನ್ ಯೋಜನೆ ಎಂಬ ಐತಿಹಾಸಿಕ ಯೋಜನೆಯನ್ನು ಘೋಷಿಸಲಾಯಿತು. ಈ ಯೋಜನೆ ಕಾರ್ಖಾನೆ, ಮಿಲ್, ಕಂಪವಿ ಮತ್ತು ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡುವರಿಗಾಗಿ ಇರುವ ಯೋಜನೆಯಾಗಿದೆ. ಹಿಂದಿನ ಸರ್ಕಾರಕ್ಕಿಂತ  ಎನ್‍ಡಿಎ ಸರ್ಕಾರದ ಕೆಲಸದ ರೀತಿ ಭಿನ್ನವಾಗಿದೆ.

*  ನಮ್ಮ ಸರ್ಕಾರ ಒಆರ್‌ಒಪಿ (ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ)ಯನ್ನು ಜಾರಿಗೆ ತಂದೆವು. ಇಷ್ಟು ವರ್ಷ ಅಧಿಕಾರದಲ್ಲಿದ್ದ ಸರ್ಕಾರ ರಕ್ಷಣಾ ವಲಯದ ಬಗ್ಗೆ ಯೋಚಿಸಿಯೇ ಇಲ್ಲ. ಅವರ ಪಾಲಿಗೆ ಈ ವಲಯ  ಒಪ್ಪಂದ ಮತ್ತು ತಮ್ಮ ಸ್ನೇಹಿತರಿಗೆ ಬೆಂಬಲ ನೀಡುವ ವಲಯ ಅಷ್ಟೇ.

*  ನಮ್ಮ ದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದುವಲ್ಲಿ ಸ್ವಯಂ ಪರ್ಯಾಪ್ತ ಆಗಬೇಕೆಂಬ ಕನಸು ನಮಗಿದೆ. ನಾವು ಸೇನೆಗೆ ಬೆಂಬಲ ನೀಡುತ್ತಾ  ನಮ್ಮ ದೇಶವನ್ನು ಸುರಕ್ಷಿತವಾಗಿರಿಸುತ್ತಿದ್ದೇವೆ.

* ಸೇನೆಯನ್ನು ಅವಮಾನಿಸುವ ಅವಕಾಶವನ್ನು ಕಾಂಗ್ರೆಸ್ ಎಂದಿಗೂ ಬಿಟ್ಟುಕೊಟ್ಟಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ನೇತಾರರೊಬ್ಬರು ಸೇನಾ ಮುಖ್ಯಸ್ಥರನ್ನು ನಿಂದಿಸಿದ್ದರು.

* ಭಾರತ್‍ಮಾಲಾ ಮೊದಲಾದ ಯೋಜನೆಗಳು  ದೇಶದ ಮೂಲೆ ಮೂಲೆಗಳ ನಡುವೆ ಸಂಪರ್ಕ ಕಲ್ಪಿಸುತ್ತವೆ. ರಸ್ತೆ ನಿರ್ಮಾಣವೂ ದುಪ್ಪಟ್ಟು ಆಗಿದೆ . 

* ಎನ್‍ಡಿಎ ಸರ್ಕಾರ ಪ್ರತಿ ಭಾರತೀಯರ ಪರವಾಗಿದೆ, ದೇಶ ಉತ್ತಮವಾಗಿದ್ದರೆ ಅಭಿವೃದ್ಧಿಯೂ ಆಗುತ್ತದೆ. 

* 2022ರ ವೇಳೆಗೆ ಎಲ್ಲರಿಗೂ ಸೂರು ಎಂಬ ಉದ್ದೇಶದಿಂದ ನಾವು  ಕಾರ್ಯ ನಿರ್ವಹಿಸುತ್ತಿದ್ದೇವೆ. ಇಂದು ಇಡೀ ಜಗತ್ತು  ಭಾರತದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದೆ, ಜನರ ಕೌಶಲ ಮತ್ತು ಶಕ್ತಿಯಿಂದ ಈ ಅಭಿವೃದ್ಧಿ ಸಾಧ್ಯವಾಗಿದೆ.

 * ಉತ್ತಮ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತರಲಾಗಿದೆ. 

*  ತಮಿಳುನಾಡಿನ ಚತುರ ಸಚಿವರ ಬಗ್ಗೆ ಮಾತನಾಡೋಣ, The Recounting Minister.  ಈ ಜಗತ್ತಿನಲ್ಲಿಯೇ ಅವರು ತುಂಬಾ ಬುದ್ಧಿವಂತ ಸಚಿವ ಎಂದುಕೊಂಡಿದ್ದಾರೆ. Mr. Recounting Minister ಅವರು ನಿಮ್ಮ ಮೂದಲಿಕೆ ಬೇಡ ಎಂದು ನಿಮ್ಮನ್ನು ನಿರಾಕರಿಸಿದ್ದಾರೆ.

* ವಿಪಕ್ಷಗಳು ನನ್ನನ್ನು ನಿಂದಿಸುತ್ತಿರುವುದರಿಂದ ಅವರಿಗೆ ಟಿವಿಯಲ್ಲಿ ಜಾಗ ಸಿಗುತ್ತಿದೆ. 

* ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸರ್ಕಾರವನ್ನು ಕೆ. ಕಾಮರಾಜ್ ಅವರು ಬಯಸಿದ್ದರು. ದೆಹಲಿಯಲ್ಲಿರುವ ಸರ್ಕಾರ ಭ್ರಷ್ಟಾಚಾರದ ವಿರುದ್ಧವಿದೆ.

* ವಿಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಉದ್ದೇಶ ಅಭಿವೃದ್ಧಿ ಅಲ್ಲ, ಅವರದ್ದೇನಿದ್ದರೂ ಮೋದಿ ವಿರೋಧಿ ಮೈತ್ರಿ.

*  ವಿಪಕ್ಷಗಳು ಭಯ ಹುಟ್ಟಿಸುವುದರಲ್ಲಿ ಮಾತ್ರ ನಿಷ್ಣಾತರು

* ಎನ್‍ಡಿಎಯ  ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯ ಮೂಲಕ  ₹7 ಲಕ್ಷದಿಂದ ₹50 ಸಾವಿರ ಕೋಟಿಯಷ್ಟು ದುಡ್ಡು 10 ವರ್ಷದಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಸಾಮಾಜಿಕ ನ್ಯಾಯದ ಜತೆ ನಮ್ಮ ಸರ್ಕಾರ ರಾಜಿ ಮಾಡಿಕೊಂಡಿದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ ನೋಡೋಣ ಎಂದು ಮೋದಿ ಸವಾಲೆಸೆದಿದ್ದಾರೆ.

ಭಾರತ ಮತ್ತು ತಮಿಳುನಾಡನ್ನು ಉತ್ತುಂಗಕ್ಕೇರಿಸುವುದಕ್ಕೆ ಜತೆಯಾಗಿ ಕಾರ್ಯವೆಸಗೋಣ ಎಂದು ಮೋದಿ ಜನತೆಗೆ ಕರೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 4

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !