ಬುಧವಾರ, ಆಗಸ್ಟ್ 21, 2019
24 °C
ವಿಷಪೂರಿತ ಆಹಾರದಿಂದ ಮೃತಪಟ್ಟಿರುವ ಶಂಕೆ

ವಿಜಯವಾಡದಲ್ಲಿ 100 ಕ್ಕೂ ಹೆಚ್ಚು ಗೋವುಗಳ ಸಾವು

Published:
Updated:
Prajavani

ಅಮರಾವತಿ: ವಿಜಯವಾಡದ ಗೋಶಾಲೆಯಲ್ಲಿ ಶುಕ್ರವಾರ ರಾತ್ರಿ 100ಕ್ಕೂ ಹೆಚ್ಚು ಗೋವುಗಳು ಮೃತಪಟ್ಟಿದ್ದು, ಹಲವು ಗಂಭೀರ ಸ್ಥಿತಿಯಲ್ಲಿವೆ. ಇಷ್ಟೊಂದು ಸಂಖ್ಯೆಯಲ್ಲಿ  ಗೋವುಗಳು ಸಾಯಲು ಆಹಾರದಲ್ಲಿ ವಿಷ ಬೆರೆತಿರುವ ಶಂಕೆ ವ್ಯಕ್ತವಾಗಿದೆ. ಮೃತ ಗೋವುಗಳ ಮರಣೋತ್ತರ ಪರೀಕ್ಷೆಯ ವರದಿ ನಂತರವೇ ನಿಖರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  

ಗೋಶಾಲೆಯಲ್ಲಿ ಕಸಾಯಿ ಖಾನೆಯಿಂದ ರಕ್ಷಿಸಿದ ಮತ್ತು ವಾರಸುದಾರರಿಲ್ಲದ ಗೋವುಗಳಿಗೆ ಇಲ್ಲಿ ರಕ್ಷಣೆ ನೀಡಲಾಗಿದೆ. ಕೆಲವನ್ನು ದಾನಿಗಳು ನೀಡಿದ್ದಾರೆ. ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಮಾಮೂಲಿಯಂತೆ ಹಸುಗಳಿಗೆ ಆಹಾರ ನೀಡಲಾಗಿದೆ. ಆದರೆ 9 ಗಂಟೆ ಸುಮಾರಿಗೆ ಒಂದೊಂದೇ ಹಸುಗಳು ಕುಸಿದುಬೀಳಲು ಆರಂಭಿಸಿದವು. 

Post Comments (+)