ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ಸರಯೂ ನದಿ ತಟದಲ್ಲಿ ದೀಪಗಳ ದಾಖಲೆ

ಕೊರಿಯಾ ಪ್ರಥಮ ಮಹಿಳೆ ಭಾಗಿ
Last Updated 7 ನವೆಂಬರ್ 2018, 2:47 IST
ಅಕ್ಷರ ಗಾತ್ರ

ಅಯೋಧ್ಯೆ: ಮಂಗಳವಾರ ದೀಪಾವಳಿಯ ಪ್ರಯುಕ್ತ ಉತ್ತರ ಪ್ರದೇಶದ ಪುಣ್ಯಕ್ಷೇತ್ರ ಅಯೋಧ್ಯೆಯಲ್ಲಿ ಮೂರು ಲಕ್ಷ ಹಣತೆಗಳನ್ನು ಬೆಳಗುವ ಮೂಲಕ ನೂತನ ವಿಶ್ವ ದಾಖಲೆ ನಿರ್ಮಿಸಲಾಯಿತು.

ಸರಯೂ ನದಿತಟದಲ್ಲಿ ಮೂರು ಲಕ್ಷ ಮಣ್ಣಿನ ಹಣತೆಗಳನ್ನು ಏಕ ಕಾಲದಲ್ಲಿ ಬೆಳಗಿಸುವ ಮೂಲಕ ದಾಖಲೆ ನಿರ್ಮಾಣವಾಯಿತು. ಗಿನ್ನಿಸ್‌ ವಿಶ್ವ ದಾಖಲೆಗಳ ಪರವಾಗಿ ಹಾಜರಿದ್ದ ಅಧಿಕಾರಿ ರಿಶಿ ನಾಥ್‌, ’ದೀಪೋತ್ಸವ’ ಸಂದರ್ಭದಲ್ಲಿ ನೂತನ ದಾಖಲೆ ನಿರ್ಮಾಣವಾಗಿರುವುದನ್ನು ಘೋಷಿಸಿದರು.

ಐದು ನಿಮಿಷಗಳಲ್ಲಿ ಒಟ್ಟು 3,01,152 ದೀಪಗಳನ್ನು ಬೆಳಗಲಾಗಿದೆ. ನದಿ ನಟದಲ್ಲಿನ ’ರಾಮ್‌ ಕಿ ಪೈಡಿ’ಯ ಎರಡೂ ಬದಿಗಳಲ್ಲಿ 3.35 ಲಕ್ಷ ದೀಪಗಳನ್ನು ಹಚ್ಚುವ ಗುರಿ ಹೊಂದಲಾಗಿತ್ತು. 2016ರಲ್ಲಿ ಹರಿಯಾಣದಲ್ಲಿ ನಿಗದಿತ ಸಮಯದಲ್ಲಿ 1,50,009 ದೀಪಗಳನ್ನು ಬೆಳಗಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಕೊರಿಯಾ ಪ್ರಥಮ ಮಹಿಳೆ ಭಾಗಿ

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೆ ಇನ್‌ ಅವರ ಪತ್ನಿ, ಕೊರಿಯಾದ ಪ್ರಥಮ ಮಹಿಳೆ ಕಿಮ್‌–ಜಂಗ್‌ ಸೂಕ್‌ ಅಯೋಧ್ಯೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. 3 ಲಕ್ಷ ದೀಪಗಳನ್ನು ಬೆಳಗುವುದು ಹಾಗೂ ನೀರಿನ ಮೇಲೆ ಶಬ್ದ–ಬೆಳಕಿನ ಮೂಲಕ ನಡೆದ ವಿಶೇಷ ಪ್ರದರ್ಶನಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಸಾಂಪ್ರದಾಯಿಕ ಆರತಿ ಬೆಳಗುವ ಆಚರಣೆಯಲ್ಲಿ ಭಾಗಿಯಾದರು. ಕಿಮ್‌–ಜಂಗ್‌ ಸೂಕ್‌ ಸೀರೆಯುಟ್ಟು ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದುಗಮನ ಸೆಳೆಯಿತು.

>ಕ್ರಿ.ಶ.48ರಲ್ಲಿ ಅಯೋಧ್ಯೆಯ ರಾಜಕುಮಾರಿ ಕೊರಿಯಾಗೆ ಹೋಗಿ ಅಲ್ಲಿನ ರಾಜನೊಂದಿಗೆ ವಿವಾಹವಾಗಿದ್ದರು. ಆಕೆಯ ನೆನಪಿನ ಸ್ಮಾರಕ ’ರಾಣಿ ಹಿಯೊ ಸ್ಮಾರಕ’.ಕೊರಿಯಾ ಪ್ರಥಮ ಮಹಿಳೆ ಕಿಮ್‌–ಜಂಗ್‌ ಸೂಕ್‌ ಮೊದಲಿಗೆ ಸ್ಮಾರಕ ಭೇಟಿ ನೀಡಿ ಗೌರವ ಸಮರ್ಪಿಸಿದರು. ಅಲ್ಲಿಂದ ರಾಮ ಕಥಾ ಉದ್ಯಾನದಲ್ಲಿ ರಾಮ ದರ್ಬಾರ್‌ ಆಚರಣೆಯಲ್ಲಿ ಭಾಗಿಯಾದರು. ರಾಮ ಮತ್ತು ಸೀತೆಯ ಪಾತ್ರಧಾರಿಗಳು ಕಿಮ್‌–ಜಂಗ್‌ ಸೂಕ್‌ ಅವರನ್ನು ಬರಮಾಡಿಕೊಂಡರು.

* ಕತ್ತಲೆಗೆ ಬೆಳಕನ್ನು ಗೆಲ್ಲುವ ಶಕ್ತಿಯಿಲ್ಲ. ನಾವೆಲ್ಲರೂ ಜತೆಗೂಡಿ ಬೆಳಕನ್ನು ಹರಡುವ ಮೂಲಕ ಎಂಥಕತ್ತಲನ್ನೂ ದೂರಾಗಿಸಬಹುದು.

–ಕಿಮ್‌–ಜಂಗ್‌ ಸೂಕ್‌,ಕೊರಿಯಾ ಪ್ರಥಮ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT