ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪತ್ತೆಯಾಗಿದ್ದ 3,188 ಮಕ್ಕಳ ರಕ್ಷಣೆ

Last Updated 5 ಸೆಪ್ಟೆಂಬರ್ 2019, 13:30 IST
ಅಕ್ಷರ ಗಾತ್ರ

ಭುವನೇಶ್ವರ: ಮಹಿಳೆ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಾಯದಿಂದ ಇಲ್ಲಿಯ ಪೊಲೀಸರು ನಾಪತ್ತೆಯಾಗಿದ್ದ 3,188 ಮಕ್ಕಳನ್ನು ರಕ್ಷಿಸಿದ್ದಾರೆ. ಇದರಲ್ಲಿ 82 ಮಕ್ಕಳು ಹೊರ ರಾಜ್ಯದವರು.

ಅಪತ್ತಿನಲ್ಲಿರುವ ಮಕ್ಕಳನ್ನು ರಕ್ಷಿಸುವ ಕಾರ್ಯಕ್ರಮದಡಿ ಈ ಕ್ರಮ ತೆಗೆದುಕೊಳ್ಳಲಾಗಿದೆ.ನಾಪತ್ತೆಯಾದ ಮಕ್ಕಳ ರಕ್ಷಣೆಗಾಗಿಕಳೆದ ಆಗಸ್ಟ್‌ 15 ರಂದು ರಾಜ್ಯ ಪೊಲೀಸ್‌ ಇಲಾಖೆ ‘ಅಪರೇಷನ್‌ ಪಾರಿ–3’ ಪ್ರಾರಂಭಿಸಿತ್ತು.

ಈ ಮಕ್ಕಳು ಗ್ಯಾರೇಜ್‌, ಮನೆ ಕೆಲಸ ಮತ್ತು ರಸ್ತೆ ಬದಿಯ ಆಹಾರ ತಯಾರಿಕೆಯಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆಂಧ್ರ ಪ್ರದೇಶ (20), ತೆಲಂಗಾಣ(4), ಛತ್ತೀಸಗಡ(8), ಜಾರ್ಖಂಡ್‌(9), ಪಶ್ಚಿಮ ಬಂಗಾಳ(17), ಮಹಾರಾಷ್ಟ್ರ(5), ದೆಹಲಿ (4) ಮಕ್ಕಳನ್ನು ರಕ್ಷಿಸಲಾಗಿದೆ.

ಮಕ್ಕಳ ಆರೋಗ್ಯ ತಪಾಸಣೆಯ ನಂತರ ಅವರನ್ನು, ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ನೀಡಲಾಗಿದೆ.

2019ರ ಮೊದಲ ಮೂರು ತಿಂಗಳಿನಲ್ಲಿ 602 ಮಕ್ಕಳು ಕಾಣೆಯಾಗಿದ್ದರು. ನಾಪತ್ತೆಯಾಗಿದ್ದ 502 ಬಾಲಕಿಯರ ಪೈಕಿ 79 ಮಂದಿಯನ್ನು ಮಾತ್ರವೇ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016ರಲ್ಲಿ 1,291 ಬಾಲಕಿಯರು ಸೇರಿದಂತೆ ಒಟ್ಟು 1,792 ಮಕ್ಕಳು ನಾಪತ್ತೆಯಾಗಿದ್ದರು. 2017ರಲ್ಲಿ 1,851 ಮಕ್ಕಳು ನಾಪತ್ತೆಯಾಗಿದ್ದು, ಅದರಲ್ಲಿ 1,360 ಬಾಲಕಿಯರು ಸೇರಿದ್ದಾರೆ. 2018ರಲ್ಲಿ 2,334 ಮಕ್ಕಳು ನಾಪತ್ತೆಯಾಗಿದ್ದು, ಅದರಲ್ಲಿ 1,875 ಹೆಣ್ಣುಮಕ್ಕಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT