ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಮೇಲ್ಸೇತುವೆ ದುರಂತ: ಸಾವಿನ ಸಂಖ್ಯೆ 6ಕ್ಕೆ ಹೆಚ್ಚಳ

Last Updated 15 ಮಾರ್ಚ್ 2019, 4:56 IST
ಅಕ್ಷರ ಗಾತ್ರ

ಮುಂಬೈ: ನಗರದ ಛತ್ರಪತಿ ಶಿವಾಜಿ ಟರ್ಮಿನಲ್ಸ್‌ ಬಳಿ ಮೇಲ್ಸೇತುವೆ ಕುಸಿದಿದ್ದು, ಮೃತಪಟ್ಟವರ ಸಂಖ್ಯೆ6ಕ್ಕೆ ಏರಿಕೆಯಾಗಿದೆ. 31 ಮಂದಿ ಗಾಯಗೊಂಡಿದ್ದಾರೆ.

ಗುರುವಾರ ಸಂಜೆ, 7.30ರ ಹೊತ್ತಿಗೆ ಇದ್ದಕ್ಕಿದ್ದಂತೆ ಮೇಲ್ಸೇತುವೆ ಕುಸಿಯಿತು. ಸಂಜೆ ಜನಸಾಂದ್ರತೆ ಹೆಚ್ಚಾಗಿರುವಾಗ ಮೇಲ್ಸೇತುವೆಯಒಂದು ಭಾಗ ಏಕಾಏಕಿ ಕುಸಿದು ಬಿದ್ದಿದೆ. ಆ ಭಾಗದ ಮೇಲೆ ನಡೆಯುತ್ತಿದ್ದವರು ಮತ್ತು ಕೆಳಗೆ ನಡೆದಾಡುತ್ತಿದ್ದವರು ಗಾಯಗೊಂಡಿದ್ದಾರೆ. ಈ ಹಳೆಯ ಮೇಲ್ಸೇತುವೆಯಲ್ಲಿ ಬೆಳಗ್ಗಿನ ಹೊತ್ತು ರಿಪೇರಿ ಕಾರ್ಯ ನಡೆಯುತ್ತಿತ್ತೆನ್ನಲಾಗಿದೆ.

ಮೃತರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಅವರಿಬ್ಬರೂ ಜಿಟಿ ಆಸ್ಪತ್ರೆ‌ಯಲ್ಲಿ ಕೆಲಸ ಮಾಡುತ್ತಿದ್ದರು. 1984ರಲ್ಲಿ ನಿರ್ಮಿಸಲಾಗಿದ್ದ ಈ ಮೇಲ್ಸೇತುವೆ ಛತ್ರಪತಿ ಶಿವಾಜಿ ಟರ್ಮಿನಲ್ಸ್‌ನ ಉತ್ತರ ಭಾಗದ ಮೊದಲ ಪ್ಲ್ಯಾಟ್‌ಫಾರ್ಮ್‌ ಹಾಗೂ ಬಿಟಿ ಲೇನ್‌ಗೆ ಸಂಪರ್ಕ
ಕಲ್ಪಿಸುತ್ತಿತ್ತು.

6 ತಿಂಗಳ ಹಿಂದಷ್ಟೇ ಸೇತುವೆ ಬಳಕೆಗೆ ಯೋಗ್ಯ ಎಂದು ಸೇತುವೆ ಕುರಿತುವರದಿ ನೀಡಿದ್ದರುಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದು, ಘಟನೆಗೆ ಕಾರಣ ಏನೆಂದು ತಿಳಿಯಲು ತನಿಖೆ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT