ಶನಿವಾರ, ಫೆಬ್ರವರಿ 29, 2020
19 °C

ಕೋಮುವಾದಕ್ಕೆ ಆದ ಸೋಲು: ಚಿದಂಬರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯ ಜನರು ಬಿಜೆಪಿ ಮುಂದಿಟ್ಟ ಕೋಮು ಧ್ರುವೀಕರಣ, ವಿಭಜನೆ ಮತ್ತು ಅಪಾಯಕಾರಿ ವಿಚಾರಗಳನ್ನು  ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.

‘ಆಪ್ ಗೆಲುವು ಸಾಧಿಸಿದೆ. ಮೋಹಕ ಮಾತುಗಳಿಂದ ಭ್ರಮೆ ಸೃಷ್ಟಿಸುವವರು ಸೋತಿದ್ದಾರೆ. ದೇಶದ ಎಲ್ಲ ಭಾಗಗಳನ್ನು ಪ್ರತಿನಿಧಿಸುವ ದೆಹಲಿಯ ಜನರು ಬಿಜೆಪಿ ಪ್ರತಿಪಾದಿಸುವ ಕೋಮು ಧ್ರುವೀಕರಣ, ವಿಭಜನೆ ಮತ್ತು ಅಪಾಯಕಾರಿ ಅಜೆಂಡಾಗಳನ್ನು ತಿರಸ್ಕರಿಸಿದ್ದಾರೆ’ ಎಂದು ಚಿದಂಬರಂ ಹೇಳಿದ್ದಾರೆ.

‘2021 ಮತ್ತು 2022ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜ್ಯಗಳಿಗೆ ದೆಹಲಿಯ ಜನರು ಒಂದೊಳ್ಳೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ’ ಎಂದು ಚಿದಂಬರಂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು