ಶನಿವಾರ, ಡಿಸೆಂಬರ್ 7, 2019
25 °C
ಪ್ರಧಾನಿ ಮೋದಿ ಪಡೆದ ಸ್ಮರಣಿಕೆಗಳ ಇ–ಹರಾಜು ಅಂತ್ಯ

ಗಾಂಧಿ ಜೊತೆಗಿನ ವರ್ಣಚಿತ್ರ ₹ 25 ಲಕ್ಷಕ್ಕೆ ಮಾರಾಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿರುವ ಸ್ಮರಣಿಕೆಗಳ ಪ್ರದರ್ಶನ ಮತ್ತು ಇ–ಹರಾಜಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಾತ್ಮ ಗಾಂಧಿ ಹಾಗೂ ಮೋದಿ ಇರುವ ವರ್ಣಚಿತ್ರ ₹ 25 ಲಕ್ಷಕ್ಕೆ ಮಾರಾಟವಾಗಿದೆ.

‘ಸೆ. 14ರಿಂದ ಆರಂಭಗೊಂಡಿದ್ದ ಈ ಪ್ರದರ್ಶನ ಮತ್ತು ಹರಾಜು ಶುಕ್ರವಾರ ಕೊನೆಗೊಂಡಿತು. ಸ್ಮರಣಿಕೆಗಳ ಮಾರಾಟದಿಂದ ಬರುವ ಹಣವನ್ನು ನಮಾಮಿ ಗಂಗೆ ಮಿಷನ್‌ ಯೋಜನೆಗೆ ನೀಡಲಾಗುತ್ತದೆ’ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇಲ್ಲಿನ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಒಟ್ಟು 2,772 ಸ್ಮರಣಿಕೆಗಳೂ ಮಾರಾಟವಾಗಿದೆ ಎಂದೂ ಸಚಿವಾಲಯ ತಿಳಿಸಿದೆ.

ಪ್ರದರ್ಶನಕ್ಕೆ ಇಡಲಾಗಿದ್ದ ಸ್ಮರಣಿಕೆಗಳು

ವರ್ಣಚಿತ್ರಗಳು, ಶಿಲ್ಪಕಲಾಕೃತಿಗಳು, ಶಾಲುಗಳು, ಜಾಕೆಟ್‌, ಪಾರಂಪರಿಕ ಸಂಗೀತ ಉಪಕರಣಗಳು, ಮಣಿಪುರದ ಜಾನಪದ ಕಲೆ ಬಿಂಬಿಸುವ ಕಲಾಕೃತಿಗಳು

₹ 500 - ಪ್ರದರ್ಶನಕ್ಕೆ ಇಡಲಾಗಿದ್ದ ಸ್ಮರಣಿಕೆಗೆ ನಿಗದಿ ಮಾಡಿದ್ದ ಕನಿಷ್ಠ ದರ

₹ 2.5ಲಕ್ಷ - ಸ್ಮರಣಿಕೆಗೆ ನಿಗದಿ ಮಾಡಿದ್ದ ಗರಿಷ್ಠ ದರ

₹ 25ಲಕ್ಷ - ಸ್ಮರಣಿಕೆಯೊಂದರ ಗರಿಷ್ಠ ಮಾರಾಟ ದರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು