ಮಂಗಳವಾರ, ಅಕ್ಟೋಬರ್ 22, 2019
25 °C

‘ಭಾರತದ ಸಾಮರ್ಥ್ಯ ತಿಳಿದಿದ್ದರೂ ಪಾಕಿಸ್ತಾನ ಕಡೆಗಣಿಸುತ್ತಿದೆ’

Published:
Updated:
Prajavani

ಮುಂಬೈ: ‘ಭಾರತದ ನಾಯಕತ್ವ ಸಮರ್ಥವಾಗಿದೆ ಎಂದು ಪಾಕಿಸ್ತಾನಕ್ಕೆ ತಿಳಿದಿದೆ. ಆದರೆ ನಮ್ಮ ನಾಯಕರು ಕಾರ್ಯೋನ್ಮುಖರಾಗುವುದಿಲ್ಲ ಎಂದು ಭಾವಿಸಿ ಸದಾ ನಮ್ಮನ್ನು ಕಡೆಗಣಿಸುತ್ತಾ ಬಂದಿದೆ. ಬಾಲಾಕೋಟ್ ವೈಮಾನಿಕ ದಾಳಿ ವೇಳೆ ಸಹ ಇದೇ ರೀತಿ ವರ್ತಿಸಿತ್ತು’ ಎಂದು ವಾಯುಪಡೆ ಮುಖ್ಯಸ್ಥ ಬಿ.ಆರ್. ಧನೋಆ ಹೇಳಿದ್ದಾರೆ.

‘1965ರ ಯುದ್ಧದ ವೇಳೆ ಸೇನಾಪಡೆಗಳು ಕಾಶ್ಮೀರದಲ್ಲಿ ಮಾತ್ರ ಕಾದಾಡುತ್ತವೆ ಎಂದು ಪಾಕಿಸ್ತಾನ ಭಾವಿಸಿತ್ತು. ಆದರೆ ಪ್ರಧಾನಿ ಲಾಲ್ ಬಹಾದೂರ್‌ ಶಾಸ್ತ್ರಿ, ಲಾಹೋರ್‌ನಲ್ಲಿನ ಗಡಿ ನಿಯಂತ್ರಣ ರೇಖೆಯ ಮುಂಚೂಣಿ ಪ್ರದೇಶಕ್ಕೆ ಸೇನೆಯನ್ನು ಕಳುಹಿಸಿದರು. ಇದನ್ನು ನಿರೀಕ್ಷಿಸದ ಪಾಕ್‌ಗೆ ಆಶ್ಚರ್ಯವಾಯಿತು. ಕಾರ್ಗಿಲ್ ಯುದ್ಧದ ವೇಳೆಯೂ ಬೊಫೋರ್ಸ್‌ ಬಂದೂಕುಗಳ ಸಹಿತ ಸೇನೆಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಅವರಿಗೆ ಮತ್ತೊಮ್ಮೆ ಆಶ್ಚರ್ಯವಾಗಿತ್ತು’ ಎಂದು ಅವರು ವಿವರಿಸಿದ್ದಾರೆ.

‘ಪುಲ್ವಾಮಾ ದಾಳಿ ಬಳಿಕವೂ ಅವರು ನಮ್ಮ ಸಾಮರ್ಥ್ಯ ಕಡೆಗಣಿಸುವುದು ಮುಂದುವರಿದಿದೆ ಬಾಲಾಕೋಟ್ ರೀತಿಯ ವೈಮಾನಿಕ ದಾಳಿಗೆ ಅನುಮತಿ ನೀಡುವುದಿಲ್ಲ ಎಂದು ಪಾಕ್ ಭಾವಿಸಿತ್ತು ’ ಎಂದರು.

ನಾಯಕತ್ವ ಪ್ರಶಂಸೆ: ವಾಯುಪಡೆ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶೀಘ್ರ ದೇಶಕ್ಕೆ ವಾಪಸ್ ಕರೆತಂದಿದ್ದಕ್ಕೆ, ರಾಜಕೀಯ ನಾಯಕತ್ವವನ್ನು ಧನೋಆ ಪ್ರಶಂಸಿಸಿದ್ದಾರೆ.

‘ಮರ್ಸಿಡಿಸ್‌ ಚಾಲನೆ ಮಾಡಿದಂತೆ’
ರಫೇಲ್ ಯುದ್ಧ ವಿಮಾನ ಹಾರಾಟ ನಡೆಸಿದ ತಮ್ಮ ಅನುಭವ ವಿವರಿಸಿದ ಅವರು, ‘ಮಾರುತಿ ಕಾರು ಓಡಿಸುವವರಿಗೆ ಮರ್ಸಿಡಿಸ್ ಚಾಲನೆ ಮಾಡುವ ಅವಕಾಶ ದೊರೆತರೆ ಸಂತೋಷವಾಗುತ್ತದೆ’ ಎಂದು ಹೇಳಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)