ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 12 ಸಾವಿರ ಸಸಿ ಮಾರಾಟ

ಸಂಡೂರು: ಸಸ್ಯ ಸಂತೆಗೆ ಜನರ ಸ್ಪಂದನೆ
Last Updated 11 ಜೂನ್ 2018, 7:41 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ ಉತ್ತರ ಅರಣ್ಯ ವಲಯ ಹಾಗೂ ತೋಟಗಾರಿಕೆ ಇಲಾಖೆ ಭಾನುವಾರದ ವಾರದ ಸಂತೆಯಲ್ಲಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಸಸ್ಯಗಳನ್ನು ವಿತರಿಸುವ ಯೋಜನೆ ಅನ್ವಯ ನಡೆಸಿದ ಸಸ್ಯಸಂತೆಯಲ್ಲಿ ಒಂದೇ ದಿನ ಸುಮಾರು 12 ಸಾವಿರ ಸಸಿಗಳು ಖರ್ಚಾಗಿವೆ. ಸಸ್ಯಸಂತೆಯನ್ನು ಸಸಿ ವಿತರಣೆ ಮೂಲಕ ವಿರಕ್ತಮಠದ ಪ್ರಭು ಸ್ವಾಮೀಜಿ ಉದ್ಘಾಟಿಸಿದರು.

ಸಸ್ಯ ಸಂತೆಯಲ್ಲಿ ಅರಣ್ಯ ಇಲಾಖೆಯವರು ಹಲಸು, ಮಾವು, ನೇರಳೆ, ನೆಲ್ಲಿ, ಉಣಸೆ, ಬೇವು, ಸಂಪಿಗೆ, ಸೀತಾಫಲ, ಹೆಬ್ಬೇವು, ಸಿಲ್ವರ್ ಓಕ್, ತುಳಸಿ, ಹೊಂಗೆ,ಬಾದಾಮಿ, ಸಿಹಿ ಹುಣಿಸೆ ಮುಂತಾದ ಸಸಿಗಳನ್ನು ಮಾರಾಟಮಾಡಿದರೆ, ತೋಟಗಾರಿಕೆ ಇಲಾಖೆಯ
ವರು ಮಾವು, ತೆಂಗು, ನಿಂಬೆ, ಕರಿಬೇವು,ನುಗ್ಗೆ, ಸಪೋಟ, ಕ್ರೋಟಾನ್ ಇತ್ಯಾದಿ ಹಣ್ಣು ಮತ್ತು ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಿದರು. ತಾಲ್ಲೂಕಿನ ವಿವಿಧೆಡೆ ಮಳೆ ಆಗುತ್ತಿರುವುದರಿಂದ ಮತ್ತು ಕಡಿಮೆ ಬೆಲೆಗೆ ಸಸಿಗಳನ್ನು ಮಾರಾಟ ಮಾಡಿದ್ದರಿಂದ, ವಿವಿಧ ಜಾತಿಯ ಗಿಡಗಳು ಬಿಸಿದೋಸೆಯಂತೆ ಖರ್ಚಾದವು.

ಪುರಸಭೆ ಅಧ್ಯಕ್ಷ ಗಡಂಬ್ಲಿ ಚೆನ್ನಪ್ಪ, ಸದಸ್ಯರಾದ ಆಶಾಲತಾ, ಸಾಧನಾ ಬೋಯಿಟೆ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಗಂಗಾಬಾಯಿ, ಉತ್ತರ ವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ, ದಕ್ಷಿಣ ವಲಯ ಅರಣ್ಯಾಧಿಕಾರಿ ಶಶಿಧರ್ ಹಾಗೂ ಸಿಬ್ಬಂದಿ, ತೋಟಗಾರಿಕೆ ಇಲಾ
ಖೆಯ ಸಹಾಯಕ ನಿರ್ದೇಶಕ ಮಕ್ಬುಲ್ ಹುಸೇನ್, ಕು‌ಬೇರ್ ಆಚಾರ್, ಸಹಾಯಕ ತೋಟಗಾರಿಕೆ ಅಧಿಕಾರಿ ಸುನಿಲ್‌ಕುಮಾರ್, ತೋಟಗಾರಿಕಾ ಸಹಾಯಕರಾದ ಹಸನ್‌ಸಾಬ್, ತಿಪ್ಪೇಸ್ವಾಮಿ, ಎಚ್.ಎಂ. ಮಂಗಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT