ಗಡಿ ಬಳಿ ಪಾಕ್ ಡ್ರೋನ್‌ ಹಾರಾಟ

ಬುಧವಾರ, ಏಪ್ರಿಲ್ 24, 2019
33 °C
01 pak drone

ಗಡಿ ಬಳಿ ಪಾಕ್ ಡ್ರೋನ್‌ ಹಾರಾಟ

Published:
Updated:

ನವದೆಹಲಿ: ಪಂಜಾಬ್‌ನ ಖೇಮ್ಕರನ್ ಸೆಕ್ಟರ್‌ನಲ್ಲಿ ಭಾರತದ ಗಡಿ ಸಮೀಪ ಹಾರಾಟ ನಡೆಸುತ್ತಿದ್ದ  ಪಾಕಿಸ್ತಾನದ ಡ್ರೋನ್‌ ಅನ್ನು ಭಾರತೀಯ ವಾಯುಪಡೆ ಸೋಮವಾರ ಪತ್ತೆಹಚ್ಚಿತು. 

ಪಾಕಿಸ್ತಾನದ ಎರಡು ಎಫ್-16 ಯುದ್ಧ ವಿಮಾನಗಳೂ ಇದೇ ವೇಳೆ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಡ್ರೋನ್‌ಗಳು ಹಾರಾಡುತ್ತಿರುವುದು ರೆಡಾರ್‌ನಲ್ಲಿ ಗೋಚರಿಸಿತ್ತು. ತಕ್ಷಣ ಸುಖೋಯ್‌ ಯುದ್ಧವಿಮಾನ ಗಡಿ ಸಮೀಪ ಹೋಗುತ್ತಿದ್ದಂತೆ ಡ್ರೋನ್‌ ಪಾಕ್ ಕಡೆ ತೆರಳಿತು. ರಾಜಸ್ಥಾನ ಮತ್ತು ಗುಜರಾತ್‌ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದ  ಪಾಕಿಸ್ತಾನದ ಹಲವು ಡ್ರೋನ್‌ಗಳನ್ನು ಭಾರತ ಕಳೆದ ಎರಡು ತಿಂಗಳಲ್ಲಿ ಹೊಡೆದುರುಳಿಸಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !