ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಬಗ್ಗೆ ಪ್ರಚೋದನಾಕಾರಿ ಬರಹ: 333 ಪಾಕ್ ಟ್ವಿಟರ್ ಖಾತೆ ಸ್ಥಗಿತ

Last Updated 5 ಸೆಪ್ಟೆಂಬರ್ 2019, 6:09 IST
ಅಕ್ಷರ ಗಾತ್ರ

ನವದೆಹಲಿ: ಸಂವಿಧಾನದ 370 ನೇ ವಿಧಿ ರದ್ದು ಮಾಡಿದ ನಂತರ ಕಾಶ್ಮೀರದ ಬಗ್ಗೆ ಪ್ರಚೋದನಾಕಾರಿ ಬರಹ ಪ್ರಕಟಿಸಿದ 333 ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಈ ಖಾತೆಗಳಲ್ಲಿ ಪ್ರಕಟವಾದ ಬರಹ ಸತ್ಯಕ್ಕೆ ದೂರವಾದುದು ಎಂದು ಭಾರತೀಯರು ಆಕ್ಷೇಪ ವ್ಯಕ್ತ ಪಡಿಸಿದ್ದರಿಂದ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿತ್ತು.

ಖಾತೆಗಳನ್ನು ನಿರ್ಬಂಧಿಸಿರುವ ಬಗ್ಗೆ ಮತ್ತು ಟ್ವೀಟ್ ಸ್ಥಗಿತ ಗೊಳಿಸಿರುವ ಬಗ್ಗೆ ಪಾಕಿಸ್ತಾನ್ ಟೆಲಿಕಮ್ಯುನಿಕೇಷವ್ ಅಥಾರಿಟಿ (ಪಿಟಿಎ), ಟ್ವಿಟರ್ ಸಂಸ್ಥೆಯನ್ನು ಪ್ರಶ್ನಿಸಿರುವುದಾಗಿ ಡಾನ್ ಬುಧವಾರ ವರದಿ ಮಾಡಿದೆ.

ಟ್ವಿಟರ್ ಸಂಸ್ಥೆಯ ನಿಲುವು ಏಕ ಪಕ್ಷೀಯವಾಗಿದೆ ಎಂದು ಪಿಟಿಎ ಹೇಳಿದೆ. ಕಾಶ್ಮೀರ ವಿಷಯಕ್ಕೆ ಸಂಬಂಧಪಟ್ಟ ಬರಹ ಪೋಸ್ಟಿಸುವ ಟ್ವಿಟರ್ ಖಾತೆಗಳನ್ನು ರಿಪೋರ್ಟ್ ಮಾಡಿ ಎಂದು ಟ್ವಿಟರ್ ಸಂಸ್ಥೆ ಪಾಕಿಸ್ತಾನದ ಟ್ವೀಟಿಗರಲ್ಲಿ ಮನವಿ ಮಾಡಿದೆ.

ಪಿಟಿಎಗೆ ಈ ರೀತಿಯ 333 ದೂರುಗಳು ಲಭಿಸಿದ್ದು, ಇದನ್ನು ಟ್ವಿಟರ್‌ಗೆ ಕಳಿಸಿಕೊಡಲಾಗಿದೆ. ಇದರಲ್ಲಿ 67 ಖಾತೆಗಳನ್ನು ಪುನಃ ಸ್ಥಾಪಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ.

ಟ್ವಿಟರ್ ಈ ಖಾತೆಗಳನ್ನು ನಿರ್ಬಂಧಿಸುವುದಕ್ಕಿರುವ ಕಾರಣ ಅಥವಾ ಅಧಿಕೃತವಾಗಿ ಪ್ರತಿಕ್ರಿಯೆ ನೀಡುವುದಾಗಲೀ ಮಾಡಿಲ್ಲ ಎಂದು ಪಿಟಿಎ ಹೇಳಿದೆ.

ಪಾಕಿಸ್ತಾನದ ಟ್ವೀಟಿಗರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇರುವ ಸ್ವಾತಂತ್ರ್ಯ ನೀಡುವುದರ ಬಗ್ಗೆ ಪ್ರಯತ್ನ ಪಡುತ್ತಿದ್ದೇವೆ.ಪಾಕಿಸ್ತಾನದಲ್ಲಿ ಅಥವಾ ಟ್ವಿಟರ್ ಅಧಿಕಾರಿಗಳು ಹೇಳುವ ಜಾಗಕ್ಕೆ ಬಂದು ಅರ್ಥಪೂರ್ಣ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದರೂ ಟ್ವಿಟರ್ ಪ್ರತಿಕ್ರಿಯಿಸಿಲ್ಲ ಎಂದು ಪಿಟಿಎ ಹೇಳಿದೆ.

ಕಾಶ್ಮೀರ ಬಗ್ಗೆ ಟ್ವೀಟ್ ಮಾಡಿದ ಸುಮಾರಿ 200 ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಾನ್ ಆಗಸ್ಟ್‌ನಲ್ಲಿ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ:ಕಾಶ್ಮೀರ ವಿಚಾರದಲ್ಲಿ ಅಮೆರಿಕ ಧೈರ್ಯದಿಂದ ಮಾತನಾಡಲಿ: ಬರ್ನಿ ಸ್ಯಾಂಡರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT