ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿರುವ ತನ್ನ ಹೈಕಮಿಷನರ್‌ಗೆ ಪಾಕ್‌ ಬುಲಾವ್

Last Updated 18 ಫೆಬ್ರುವರಿ 2019, 10:41 IST
ಅಕ್ಷರ ಗಾತ್ರ

ನವದೆಹಲಿ: ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್‌ ಸೊಹೇಲ್‌ ಮೊಹಮ್ಮದ್‌ಅವರು ತಕ್ಷಣ ವಾಪಾಸ್‌ ಬರುವಂತೆ ಪಾಕಿಸ್ತಾನ ಸೂಚಿಸಿದೆ.

‘ದಾಳಿ ಬಗ್ಗೆ ಸಮಾಲೋಚನೆ ನಡೆಸಲು ಹೈಕಮಿಷನರ್‌ ಅವರನ್ನು ಕರೆಸಿಕೊಂಡಿದ್ದೇವೆ. ಬೆಳಿಗ್ಗೆಯೇ ಅವರು ದೆಹಲಿಯಿಂದ ಹೊರಟಿದ್ದಾರೆ’ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್‌ ಫೈಸಲ್‌ ಸೋಮವಾರ ಟ್ವೀಟ್‌ ಮಾಡಿದ್ದಾರೆ.

ಇದೇ ಶುಕ್ರವಾರ ಸೊಗೇಲ್‌ ಮೊಹಮ್ಮದ್‌ ಅವರನ್ನು ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ ಅವರುಕಚೇರಿ ಕರೆಸಿಕೊಂಡಿದ್ದು,ಪುಲ್ವಾಮಾ ದಾಳಿಯ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದರು. ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಮತ್ತು ಈ ಕ್ರಮ ಗೋಚರಿಸುವಂತಿರಬೇಕು. ಉಗ್ರರಿಗೆ ಪಾಕಿಸ್ತಾನವು ನೀಡುತ್ತಿರುವ ಬೆಂಬಲವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೊಹೇಲ್‌ಗೆ ಹೇಳಿದ್ದರು.

ಆಶ್ಚರ್ಯಕರ ಸಂಗತಿ ಎಂದರೆ, ಪಾಕಿಸ್ತಾನಕ್ಕೆ ಅಮೆರಿಕ ರಾಯಭಾರಿ ಪೌಲ್‌ ಜಾನ್ಸ್‌ ಅವರು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಾನ್‌ಜುವ ಅವರನ್ನು ಭೇಟಿಯಾಗಿ ದಾಳಿಯ ಬಗ್ಗೆ ಅಮೆರಿಕದ ನಿಲುವನ್ನು ತಿಳಿಸಿದ್ದು, ಉಗ್ರ ಸಂಘಟನೆಗಳನ್ನು ಹತ್ತಿಕ್ಕಲು ಎಲ್ಲಾ ರೀತಿಯ ಬೆಂಬಲವನ್ನು ನೀಡುವುದಾಗಿ ಹೇಳಿದ್ದಾರೆ.

ಉಗ್ರರ ದಾಳಿಯ ಬಗ್ಗೆ ಸಮಾಲೋಚನೆ ನಡೆಸುವ ಸಂಬಂಧ ಪಾಕಿಸ್ತಾನಕ್ಕೆ ಭಾರತದ ಹೈಕಮಿಷನರ್‌ ಆಗಿರುವ ಅಜಯ್‌ ಬಿಸಾರಿಯಾ ಅವರನ್ನು ಭಾರತ ಶುಕ್ರವಾರವೇ ವಾಪಸ್‌ ಕರೆಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT