ಸೋಮವಾರ, ನವೆಂಬರ್ 18, 2019
25 °C

ಬಿಕ್ಕಟ್ಟು ಶಮನ: ಇರಾನ್‌ಗೆ ಇಮ್ರಾನ್‌ ಭೇಟಿ

Published:
Updated:

ಇಸ್ಲಾಮಾಬಾದ್: ಇರಾನ್‌ ಮತ್ತು ಸೌದಿ ಅರೇಬಿಯಾ ನಡುವಿನ ಬಿಗುವಿನ ಸ್ಥಿತಿ ಶಮನಗೊಳಿಸಲು ನೆರವಾಗುವ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಭಾನುವಾರ ಟೆಹರಾನ್‌ಗೆ ತೆರಳಿದರು.

 ಇಮ್ರಾನ್‌ ಖಾನ್‌ ಅವರು ಇರಾನ್‌ನ ಪರಮೋಚ್ಛ ನಾಯಕ ಎ ಅಲಿ ಖಮೇನಿ ಮತ್ತು ಅಧ್ಯಕ್ಷ ಹಸನ್‌ ರೌಹಾನಿ ಸೇರಿ ಪ್ರಮುಖ ನಾಯಕರನ್ನು ಭೇಟಿ ಮಾಡುವ ಸಂಭವವಿದೆ.

ಇರಾನ್‌ಗೆ ಈ ವರ್ಷ ಇದು ಇಮ್ರಾನ್‌ ಅವರ ಎರಡನೇ ಭೇಟಿ. ವಿದೇಶಾಂಗ ಸಚಿವ ಮಹಮ್ಮದ್‌ ಖುರೇಷಿ, ಪ್ರಧಾನಿಯ ಸಾಗರೋತ್ತರ ವಿಶೇಷ ಸಹಾಯಕ ಸೈಯದ್‌ ಜುಲ್ಫೀಕರ್ ಅಬ್ಬಾಸ್‌ ಬುಖಾರಿ ಕೂಡ ತೆರಳಿದರು.

2015ರಲ್ಲಿ ಯಮೆನ್‌ ಮೇಲಿನ ದಾಳಿಯ ನಂತರ ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಸೆಪ್ಟೆಂಬರ್ 14ರಂದು ತೈಲ ಘಟಕಗಳ ಮೇಲಿನ ದಾಳಿ ನಂತರ ಇನ್ನಷ್ಟು ಉಲ್ಬಣಗೊಂಡಿದೆ.

ಪ್ರತಿಕ್ರಿಯಿಸಿ (+)