ಭಾನುವಾರ, ಜೂನ್ 13, 2021
25 °C

ಕರ್ತಾರ್‌ಪುರ ಕಾರಿಡಾರ್‌ ತೆರೆದ ಪಾಕ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ಕೋವಿಡ್‌–19ರ ಹಿನ್ನೆಲೆಯಲ್ಲಿ ಕರ್ತಾರ್‌ಪುರ ಕಾರಿಡಾರ್ ಅನ್ನು ತಾತ್ಕಾಲಿಕವಾಗಿ  ಮುಚ್ಚಿದ್ದ ಪಾಕಿಸ್ತಾನ, ಮೂರು ತಿಂಗಳ ನಂತರ ಸೋಮವಾರ ಯಾತ್ರಿಕರ ಭೇಟಿಗೆ ತೆರವುಗೊಳಿಸಿದೆ.

‘ಭಾರತದಿಂದ ಯಾವುದೇ ಯಾತ್ರಿಕರು ಕರ್ತಾರ್‌ಪುರದ ಗುರುದ್ವಾರ ದರ್ಬಾರ್‌ ಸಾಹೀಬ್‌ಗೆ ಭೇಟಿ ನೀಡಿಲ್ಲ’ ಎಂದು ಇಟಿಪಿಬಿ ನಿರ್ದೇಶಕ ಇಮ್ರಾನ್‌ ಖಾನ್‌ ಪಿಟಿಐಗೆ ತಿಳಿಸಿದ್ದಾರೆ.   

‘ಪಾಕಿಸ್ತಾನ ಮತ್ತು ಭಾರತದ ಯಾತ್ರಿಕರಿಗೆ ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಮಾರ್ಗಸೂಚಿ ಅನ್ವಯ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಯಾತ್ರಿಕರ ಸುರಕ್ಷತೆಗೆ ಇಟಿಪಿಬಿ ಮತ್ತು ಪಾಕಿಸ್ತಾನ್‌ ಸಿಖ್‌ ಗುರುದ್ವಾರ ಪರ್ಬಂಧಿಕ್‌ ಸಮಿತಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿವೆ’ ಎಂದು ಅವರು ಹೇಳಿದ್ದಾರೆ. 

ಮಹಾರಾಜ ರಣ್‌ಜಿತ್‌ ಸಿಂಗ್‌ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಜೂನ್‌ 29ರಿಂದ ಕಾರಿಡಾರ್‌ ಅನ್ನು ಎಲ್ಲ ಸಿಖ್‌ ಯಾತ್ರಿಕರಿಗೆ ತೆರೆಯುವ ಬಗ್ಗೆ ಈ ಹಿಂದೆ ಪಾಕ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೊಹಮ್ಮದ್‌ ಖುರೇಷಿ ತಿಳಿಸಿದ್ದರು.  

ಮಾರ್ಚ್‌ 16ರಂದು ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಕಾರಿಡಾರ್‌ ಅನ್ನು ಮುಚ್ಚಲಾಗಿತ್ತು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು