ಪೂಂಚ್ ಜಿಲ್ಲೆ ಬಳಿ ಪಾಕ್‌ ದಾಳಿ: ಇಬ್ಬರ ಸಾವು

ಶುಕ್ರವಾರ, ಏಪ್ರಿಲ್ 26, 2019
36 °C

ಪೂಂಚ್ ಜಿಲ್ಲೆ ಬಳಿ ಪಾಕ್‌ ದಾಳಿ: ಇಬ್ಬರ ಸಾವು

Published:
Updated:

ಜಮ್ಮು: ಇಲ್ಲಿನ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿಯ ಮುಂಚೂಣಿ ಪ್ರದೇಶದ ಮೇಲೆ ಪಾಕಿಸ್ತಾನ ಸೇನೆ ಶೆಲ್‌ ದಾಳಿ ನಡೆಸಿದ್ದು, ಬಿಎಸ್‌ಎಫ್‌ ಯೋಧ ಹಾಗೂ ಬಾಲಕಿ ಮೃತಪಟ್ಟಿದ್ದಾರೆ. ಗಡಿ ಜನರನ್ನು ಹೆದರಿಸಲು ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಹಪುರ ಗ್ರಾಮದ ಮೇಲೆ ನಡೆದ ದಾಳಿಯಲ್ಲಿ ತನ್ನ ಮನೆ ಮುಂದೆ ಆಡುತ್ತಿದ್ದ ಬಾಲಕಿ ಸೋಬಿಯಾ (5) ತೀವ್ರ ಗಾಯವಾಗಿ ಮೃತಪಟ್ಟಿದ್ದಾರೆ. 6 ಯೋಧರು ಸೇರಿ 11ಮಂದಿಗೆ ಗಾಯಗಳಾಗಿವೆ. ಸತತ ನಾಲ್ಕನೇ ಬಾರಿ ಪಾಕಿಸ್ತಾನ ಪೂಂಚ್ ಮತ್ತು ರಾಜೌರಿ ಜಿಲ್ಲೆಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ‘ ಎಂದು ಶಾಹಪುರ ಠಾಣಾಧಿಕಾರಿ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 7.40ರ ಹೊತ್ತಿಗೆ ಶಾಂಪುರ್ ಮತ್ತು ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಪಾಕ್ ಶೇಲ್‌ ಹಾಗೂ ಬಂದೂಕಿನಿಂದ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದೆ. ಇದಕ್ಕೆ ಭಾರತ ಉತ್ತರ ನೀಡಲಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಅಸಬಾ, ಕೆರ್ನಿ, ಗುಂತಾರಿಯಾನ್ ಮತ್ತು ಶಹಪುರದ ಗಡಿ ನಿಯಂತ್ರಣ ರೇಖೆಯ ಮುಂಚೂಣಿ ಪ್ರದೇಶದ ನಾಗರಿಕರನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಿದ್ದು, ನಾಗರಿಕರಿಗೆ ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ. ಸ್ಥಳೀಯ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !