ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್ ಇಬ್ರಾಹಿಂ, ಸಲಾಹುದ್ದೀನ್‌ನನ್ನು ಒಪ್ಪಿಸಿ: ಪಾಕಿಸ್ತಾನಕ್ಕೆ ಭಾರತ ಆಗ್ರಹ

Last Updated 16 ಮಾರ್ಚ್ 2019, 10:54 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಾಮಾಣಿಕತೆ ಇದ್ದಲ್ಲಿದಾವೂದ್ ಇಬ್ರಾಹಿಂ, ಸೈಯದ್ ಸಲಾಹುದ್ದೀನ್ ಹಾಗೂ ಇತರ ಭಯೋತ್ಪಾದಕರನ್ನುಪಾಕಿಸ್ತಾನಹಸ್ತಾಂತರ ಮಾಡಬೇಕು ಎಂದು ಭಾರತ ಆಗ್ರಹಿಸಿದೆ.

ಪುಲ್ವಾಮಾ ದಾಳಿಯ ಬಳಿಕವೂ ಜೈಷ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಭಾರತ ಆರೋಪಿಸಿದೆ. ಉಗ್ರರನ್ನು ವಶಕ್ಕೆ ತೆಗೆದುಕೊಂಡಿರುವ ಪಾಕಿಸ್ತಾನದ ನಡೆಯನ್ನು ತೋರಿಕೆಯ ಕ್ರಮ ಎಂದು ದೂರಿದೆ. ಇಂತಹ ಕ್ರಮಗಳಿಂದ ಏನೂ ಆಗುವುದಿಲ್ಲ ಎಂದು ಹೇಳಿದೆ.

ದಾವೂದ್, ಸಲಾಹುದ್ದೀನ್‌ರನ್ನು ಒಪ್ಪಿಸುವಂತೆ ಮೊದಲಿನಿಂದಲೂ ಭಾರತ ಬೇಡಿಕೆ ಇಟ್ಟಿದೆ. ಪಾಕ್‌ ನೆಲದಲ್ಲಿ ಉಗ್ರರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸುವ ಸಾಕ್ಷ್ಯಗಳನ್ನೂ ಭಾರತ ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT