ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌, ಬಾಂಗ್ಲಾ ಮುಸ್ಲಿಮರನ್ನು ಹೊರಗಟ್ಟಿ: ಶಿವಸೇನಾ ಮುಖವಾಣಿ ಸಾಮ್ನಾ

Last Updated 25 ಜನವರಿ 2020, 4:10 IST
ಅಕ್ಷರ ಗಾತ್ರ

ಮಹಾರಾಷ್ಟ್ರ:‘ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕು. ಅದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಶಿವಸೇನಾ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

‘ಯಾರು ವಿರೋಧ ಮಾಡಿದರೂ ಸರಿಯೇ ನೆರೆ ರಾಷ್ಟ್ರಗಳಿಂದ ನಮ್ಮ ದೇಶಕ್ಕೆ ಬಂದಿರುವ ಮುಸ್ಲಿಂವಲಸಿಗರನ್ನು ಹೊರಗಟ್ಟಬೇಕು ಎನ್ನುವುದರಲ್ಲಿಎರಡು ಮಾತಿಲ್ಲ.ಶಿವಸೇನೆ ಹಿಂದುತ್ವಕ್ಕಾಗಿ ಸದಾ ಹೋರಾಡಿದೆ. ಆದರೆ, ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಸಾಕಷ್ಟು ದೋಷಗಳಿರುವುದರಿಂದ ಅದನ್ನು ವಿರೋಧಿಸಲಾಗುತ್ತಿದೆ’ ಎಂದು ಹೇಳಿದೆ.

ಎಂಎನ್‌ಎಸ್‌ ಇತ್ತೀಚೆಗೆ ತನ್ನ ಧ್ವಜವನ್ನು ಬದಲಿಸಿಕೊಂಡಿರುವುದು ಮತ್ತು ಹಿಂದುತ್ವದ ಬಗ್ಗೆ ಮಾತನಾಡುತ್ತಿರುವ ರಾಜ್‌ ಠಾಕ್ರೆಕುರಿತು ಸಾಮ್ನಾ ತನ್ನಸಂಪಾದಕೀಯದಲ್ಲಿ ಟೀಕಿಸಿದೆ.

‘ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಮರಾಠಿಗರ ವಿಷಯವನ್ನು ಇಟ್ಟುಕೊಂಡು 14 ವರ್ಷಗಳ ಹಿಂದೆಶುರುವಾಗಿತ್ತು. ಆದರೆ, ಇಂದು ಅದು ಸಂಪೂರ್ಣ ಹಿಂದೂ ಧರ್ಮದತ್ತ ತಿರುಗಿದೆ. ಇದಕ್ಕೆ ಹೊಸದಾಗಿ ಅನಾವರಣಗೊಂಡ ಪಕ್ಷದ ಧ್ವಜವೇ ಸಾಕ್ಷಿ. ಇದು ಅವರಲ್ಲಿರುವ ಗೊಂದಲಕ್ಕೆ ಹಿಡಿದ ಕನ್ನಡಿ’ಎಂದು ಬರೆದುಕೊಂಡಿದೆ.

‘ಶಿವಸೇನೆ ಮರಾಠಿ ವಿಷಯದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಹಾಗಾಗಿ ಮರಾಠಿಗರ ಮನಸ್ಸಿನಲ್ಲಿಶಿವಸೇನೆ ಎಂದಿಗೂ ಇರುತ್ತದೆ. ಜೊತೆಗೆ ತೀವ್ರವಾದ ಹಿಂದುತ್ವದ ವಿಷಯದ ಬಗ್ಗೆಯೂಶಿವಸೇನೆ ಸಾಕಷ್ಟು ಕೆಲಸ ಮಾಡಿದೆ. ಹಿಂದುತ್ವದ ಕೇಸರಿ ಬಣ್ಣವನ್ನುಶಿವಸೇನೆ ಎಂದಿಗೂ ಬಿಟ್ಟಿಲ್ಲ. ರಾಜ್‌ ಠಾಕ್ರೆ ಈಗ ಅದರ ಬೆನ್ನಿಗೆ ಬಿದಿದ್ದಾರೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT