ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‍ನಲ್ಲಿ ಪಾಕ್ ಗೂಢಚಾರ ಬಂಧನ

Last Updated 1 ಮಾರ್ಚ್ 2019, 7:37 IST
ಅಕ್ಷರ ಗಾತ್ರ

ಫೆರೋಜ್‍ಪುರ್: ಪಂಜಾಬ್‍ನಲ್ಲಿ ಪಾಕಿಸ್ತಾನದ ಗೂಢಚಾರನೊಬ್ಬನನ್ನು ಬಿಎಸ್‍ಎಫ್ ಯೋಧರು ಶುಕ್ರವಾರ ಬಂಧಿಸಿದ್ದಾರೆ.

ಇಲ್ಲಿನ ಮಾಬ್ಬೋ ಔಟ್‍ಪೋಸ್ಟ್ ಬಳಿ ಈತನನ್ನು ಸೆರೆ ಹಿಡಿದಿದ್ದು, ಮೊರದಾಬಾದ್ ಮೂಲದ ಮೊಹಮ್ಮದ್ ಶಾರುಖ್ (21) ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಬಿಎಸ್‍ಎಫ್ ಈತನ ಬಳಿಯಲ್ಲಿದ್ದ ಮೊಬೈಲ್ ಫೋನ್‍ನಲ್ಲಿ ಪಾಕಿಸ್ತಾನದ ಸಿಮ್ ಕಾರ್ಡ್ ವಶಪಡಿಸಿಕೊಂಡಿದೆ. ಈತ ಪಾಕಿಸ್ತಾನ ಮೂಲದ 6 ವಾಟ್ಸ್ಆ್ಯಪ್ ಗ್ರೂಪ್‍ಗಳ ಸದಸ್ಯನಾಗಿದ್ದಾನೆ.

ಬೆಡ್ ಶೀಟೊಂದನ್ನು ಹೊದ್ದುಕೊಂಡಿದ್ದ ಈತ ಔಟ್ ಪೋಸ್ಟ್ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಬಿಎಸ್‍ಎಫ್ ಈತನನ್ನು ಸೆರೆ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT