ಭಾನುವಾರ, ಸೆಪ್ಟೆಂಬರ್ 15, 2019
30 °C

ಪ್ರಧಾನಿ ಮೋದಿಗೆ ಯುಎಇ ದೇಶದ ಅತ್ಯುನ್ನತ ಗೌರವ; ಪಾಕ್ ಟ್ವೀಟಿಗರ ಆಕ್ರೋಶ

Published:
Updated:

ನವದೆಹಲಿ: ದ್ವಿಪಕ್ಷೀಯ ಸಂಬಂಧ ಸದೃಢಗೊಳಿಸಲು ತೆಗೆದುಕೊಂಡ ಕ್ರಮಗಳನ್ನು ಶ್ಲಾಘಿಸಿ, ನರೇಂದ್ರ ಮೋದಿಗೆ ಯುಎಇ ದೇಶದ ಅತ್ಯುನ್ನತ ಗೌರವ ‘ಆರ್ಡರ್ ಆಫ್ ಝಾಯೇದ್’ ಪ್ರದಾನ ಮಾಡಲಾಗಿದೆ. ಈ ಗೌರವಕ್ಕೆ ಮೋದಿ ಅವರ ಹೆಸರನ್ನು ಏಪ್ರಿಲ್ ತಿಂಗಳಿನಲ್ಲಿ ಘೋಷಿಸಲಾಗಿತ್ತು. 

ಇದನ್ನೂ ಓದಿ: ಯುಎಇನಲ್ಲಿ ರುಪೇ ಕಾರ್ಡ್ ಬಳಕೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಮೋದಿಯವರಿಗೆ ಆರ್ಡರ್ ಆಫ್ ಝಾಯೇದ್ ಗೌರವ ನೀಡಿದ್ದಕ್ಕಾಗಿ ಪಾಕಿಸ್ತಾನದ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿ ಟ್ವಿಟರ್‌ನಲ್ಲಿ #ShameonUAE  ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಚಾಡಿ ಮಾತುಗಳನ್ನಾಡಿದ್ದರೂ  ಮುಸ್ಲಿಂ ರಾಷ್ಟ್ರ ಅಥವಾ  ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ)ಗಳ ಗಮನ ಸೆಳೆಯಲು ಪಾಕ್ ವಿಫಲವಾಗಿತ್ತು. ಕಳೆದ ಐದು ವರ್ಷಗಳಲ್ಲಿ ಮೋದಿಯವರಿಗೆ ಮುಸ್ಲಿಂ ರಾಷ್ಟ್ರಗಳಿಂದ 6 ಪ್ರಶಸ್ತಿಗಳು ಲಭಿಸಿವೆ.
 

Post Comments (+)