ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕ ಗ್ರಹಕ್ಕೆ ಪಂ.ಜಸ್‌ರಾಜ್‌ ಹೆಸರು

Last Updated 29 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಮಂಗಳ ಮತ್ತು ಗುರು ಗ್ರಹಗಳ ನಡುವೆ ಪತ್ತೆ ಮಾಡಲಾಗಿರುವ ಚಿಕ್ಕ ಗ್ರಹವೊಂದಕ್ಕೆ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪಂ. ಜಸ್‌ರಾಜ್‌ ಅವರ ಹೆಸರಿಡಲಾಗಿದೆ.

ಇಂಟರ್‌ನ್ಯಾಷನಲ್‌ ಅಸ್ಟ್ರಾನಾಮಿಕಲ್‌ ಯೂನಿಯನ್‌ (ಐಎಯು) ಈ ನಾಮಕರಣ ಮಾಡಿದೆ. ‘ಸೆ. 25ರಂದು ಐಎಯು ಅಧಿಕೃತವಾಗಿ ಈ ಕುರಿತು ಘೋಷಣೆ ಮಾಡಿದ್ದು, ಪ್ರಶಂಸಾಪತ್ರ ನೀಡಿದೆ’ ಎಂದು ಅವರ ಪುತ್ರಿ ದುರ್ಗಾ ಜಸ್‌ರಾಜ್‌ ತಿಳಿಸಿದ್ದಾರೆ.

2006ರ ನವೆಂಬರ್‌ 11ರಂದು ಈ ಗ್ರಹವನ್ನು ಪತ್ತೆ ಮಾಡಲಾಗಿದೆ. ಆಗ ಇದಕ್ಕೆ ‘2006ವಿಪಿ32‘ ಎಂದು ಕರೆಯಲಾಗಿತ್ತು. ಈಗ ಜಸ್‌ರಾಜ್‌ ಅವರ ಜನ್ಮದಿನಾಂಕ (28–01/30)ವನ್ನು ಉಲ್ಟಾ ಬರೆದಾಗ 300128 ಆಗುತ್ತದೆ. ಐಎಯುನ ವೆಬ್‌ಸೈಟ್‌ನಲ್ಲಿ ಈ ಸಂಖ್ಯೆಯನ್ನು ನಮೂದಿಸಿದಾಗ ‘ಪಂಡಿತ್‌ಜಸ್‌ರಾಜ್‌’ ಗ್ರಹದ ಚಿತ್ರ ಹಾಗೂ ವಿವರಗಳು ಲಭ್ಯವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT