ಶುಕ್ರವಾರ, ನವೆಂಬರ್ 22, 2019
21 °C

ಮಹಾರಾಷ್ಟ್ರ: ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದ ಪಂಕಜ್ ಮುಂಡೆ

Published:
Updated:

ಮುಂಬೈ: ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪಂಕಜ್ ಮುಂಡೆ ಅವರು ಬೀಡ್ ಜಿಲ್ಲೆಯ ಪರ್ಲಿಎಂಬಲ್ಲಿ ಶನಿವಾರ ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದಿದ್ದಾರೆ.

ಮುಂಡೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ

ಸೋಮವಾರ ವಿಧಾನಸಭಾ ಚುನಾವಣೆ ನಡೆಯಲಿದೆ. ಪಂಕಜ್ ಮುಂಡೆಯವರು ತಮ್ಮ ಸಂಬಂಧಿ ಎಸಿಪಿ ನಾಯಕ ಧನಂಜಯ ಮುಂಡೆ ವಿರುದ್ಧ ಪರ್ಲಿ ವಿಧಾಸ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

ನಿರಂತರ ಐದು ಚುನಾವಣಾ ರ್‍ಯಾಲಿಗಳಲ್ಲಿ ಭಾಗವಹಿಸಿ ಬಳಲಿದ್ದರು, ಪೆರ್ಲಿಯ  ಚುನಾವಣಾ ವೇದಿಕೆಯಲ್ಲಿ ಭಾಷಣ ಮಾಡುತ್ತಿರುವಾಗ ಕುಸಿದು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬೀಡ್‌  ಲೋಕಸಭಾ ಕ್ಷೇತ್ರದ ಸಂಸದೆ ಪ್ರೀತಂ ಮುಂಡೆ ಹಾಜರಿದ್ದು ನೆರವಿಗೆ ಧಾವಿಸಿದ್ದಾರೆ.

ಬಿಡುವಿಲ್ಲದ ಚುನಾವಣಾ ಪ್ರಚಾರದಲ್ಲಿ ಅವರು ಬಳಲಿರುವುದಾಗಿ ಬಿಜೆಪಿ ವಕ್ತಾರ ಕೇಶವ್‌ ಉಪಾಧ್ಯಾಯ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ವಿಡಿಯೊ ಸ್ಟೋರಿ: ಗೋಪಿನಾಥ್‌ ಮುಂಡೆ ಪುತ್ರಿ ’ಪ್ರೀತಂ’ ವಿಶ್ವಾಸದ ಗಣಿ

 

ಪ್ರತಿಕ್ರಿಯಿಸಿ (+)