ಬುಧವಾರ, ನವೆಂಬರ್ 13, 2019
22 °C

ಇಂಡಿಗೊ ಸರ್ವರ್‌ ಸ್ಥಗಿತ:ಪ್ರಯಾಣ ಪರದಾಟ

Published:
Updated:

ನವದೆಹಲಿ: ಇಂಡಿಗೊ ವಿಮಾನಯಾನ ಸಂಸ್ಥೆಯ ಸರ್ವರ್‌ ಸೋಮವಾರ ಬೆಳಿಗ್ಗೆ ಒಂದು ಗಂಟೆಗೂ ಹೆಚ್ಚು ಹೊತ್ತು ಕಾರ್ಯನಿರ್ವಹಿಸದೇ ಇದ್ದುದರಿಂದ ದೇಶದಾದ್ಯಂತ ಇಂಡಿಗೊ ವಿಮಾನ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.

ಬೆಳಿಗ್ಗೆ ಸುಮಾರು 11.30ಕ್ಕೆ ಸರ್ವರ್‌ ಸ್ಥಗಿತಗೊಂಡಿತು. ಇದರಿಂದ, ಬೋರ್ಡಿಂಗ್‌ ಟಿಕೆಟ್‌ಗಳನ್ನು ನೀಡುವುದು ಸಾಧ್ಯವಾಗಲಿಲ್ಲ.

ಹೀಗಾಗಿ, ಪ್ರಯಾಣಿಕರು ಸರತಿ ಸಾಲಿನಲ್ಲಿ ದೀರ್ಘಹೊತ್ತು ಕಾಯಬೇಕಾಯಿತು. ಸರ್ವರ್‌ ಸ್ಥಗಿತ ಗೊಂಡು  ಪ್ರಯಾಣಿಕರಿಗೆ ತೊಂದರೆ ಉಂಟಾಗಿರುವುದಕ್ಕೆ ಕಂಪೆನಿ ಪ್ರಯಾಣಿಕರ ಕ್ಷಮೆ ಯಾಚಿಸಿದೆ.

 

ಪ್ರತಿಕ್ರಿಯಿಸಿ (+)