ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ವಂಚನೆ: ₹23 ಲಕ್ಷ ಕಳೆದುಕೊಂಡ ಪಂಜಾಬ್ ಸಿಎಂ ಪತ್ನಿ

Last Updated 8 ಆಗಸ್ಟ್ 2019, 5:58 IST
ಅಕ್ಷರ ಗಾತ್ರ

ಪಟಿಯಾಲ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ, ಪಟಿಯಾಲಾ ಸಂಸದೆ ಪ್ರೆಣೀತ್ ಕೌರ್ ಆನ್‌ಲೈನ್ ಮೋಸ ಜಾಲದಲ್ಲಿ ₹23 ಲಕ್ಷ ಕಳೆದುಕೊಂಡಿದ್ದಾರೆ.

ಪ್ರೆಣೀತ್ ಕೌರ್ ಅವರು ಜುಲೈ 29ರಂದು ಸಂಸತ್ ಕಲಾಪದಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದಾಗ ಈ ಘಟನೆ ನಡೆದಿದೆ.ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು ಎಂದಿದ್ದಾರೆ ಕೌರ್.

ಮೋಸ ಮಾಡಿದ ವ್ಯಕ್ತಿ ಅಟ್ಟುಲ್ ಅನ್ಸಾರಿಯನ್ನು ಪೊಲೀಸರು ಆಗಸ್ಟ್ 3 ರಂದು ರಾಂಚಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತಾನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಎಂದು ಹೇಳಿ ಕೌರ್‌ಗೆ ಫೋನ್ ಮಾಡಿದ್ದು.ಸಂಬಳದ ಬಾಕಿ ಹಣವನ್ನು ಜಮೆ ಮಾಡುವುದಕ್ಕಾಗಿ ಬ್ಯಾಂಕ್ ಖಾತೆಯ ವಿವರಗಳು ಬೇಕು ಎಂದು ಕೇಳಿದ್ದನು.

ಕೌರ್ ಅವರು ಬ್ಯಾಂಕ್ ಖಾತೆ ಸಂಖ್ಯೆ, ಎಟಿಎಂ ಕಾರ್ಡ್ ಸಂಖ್ಯೆ, ಸಿವಿಸಿ ಸಂಖ್ಯೆ ಮತ್ತು ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆಯನ್ನು ಶೇರ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ ಕೂಡಲೇ ಸೈಬರ್ ಪೊಲೀಸರು ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.ಅನ್ಸಾರಿ ಸೈಬರ್ ಅಪರಾಧ ನಡೆಸುವ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಈ ತಂಡ ಜಾರ್ಖಂಡ್‌ನ ಜಮ್‌ತರಾ ಗ್ರಾಮದಲ್ಲಿ ಕಾರ್ಯವೆಸಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT