ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಗೂ ಮುನ್ನ ಯುದ್ಧ ಎದುರಾಗಬಹುದೆಂದು ಬಿಜೆಪಿ ಹೇಳಿತ್ತು: ಪವನ್‌

Last Updated 1 ಮಾರ್ಚ್ 2019, 10:24 IST
ಅಕ್ಷರ ಗಾತ್ರ

ಕಡಪ ( ಆಂಧ್ರಪ್ರದೇಶ): ಲೋಕಸಭಾ ಚುನಾವಣೆಗೂ ಮುನ್ನ ಯುದ್ಧವನ್ನು ಎದುರಾಗಬಹುದು ಎಂದು ಬಿಜೆಪಿ ನನಗೆ ಎರಡು ವರ್ಷಗಳ ಹಿಂದೆಯೇ ಹೇಳಿತ್ತು ಎಂದು ಟಾಲಿವುಡ್‌ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಗುರುವಾರ ಹೇಳಿದ್ದಾರೆ.

ಕಡಪ ಜಿಲ್ಲೆಯಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುದ್ಧ ಎದುರಾಗಲಿದೆ ಎಂದು ಬಿಜೆಪಿ ಎರಡು ವರ್ಷಗಳ ಹಿಂದೆಯೇ ನನಗೆ ಹೇಳಿತ್ತು. ಪ್ರಸ್ತುತ ದೇಶದ ಸನ್ನಿವೇಶವನ್ನು ಗಮನಿಸಿದರೆ ನಿಮಗೆ ಅರ್ಥವಾಗುತ್ತದೆ ಎಂದರು. ಈ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿದ್ದ ಪವನ್‌ ಕಲ್ಯಾಣ ಪ್ರಸ್ತುತಎನ್‌ಡಿಎ ತೊರೆದಿದ್ದಾರೆ. ಮುಂಬರುವಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದೆ.

ಯುದ್ಧ ಯಾವುದೇ ಸಮಸ್ಯೆಗೆ ಪರಿಹಾರವಾಗುವುದಿಲ್ಲ, ಎರಡು ದೇಶಗಳ ನಡುವೆ ಅಪಾರವಾದ ಹಾನಿಗೆ ರಹ ದಾರಿಯಾಗುತ್ತದೆಬಿಜೆಪಿ ಸೈನಿಕರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ, ಬಿಜೆಪಿಯವರು ನಾವು ಮಾತ್ರ ದೇಶಭಕ್ತರು ಎಂದು ಭಾವಿಸಿದ್ದಾರೆ ಆದರೆ ಅವರಿಗಿಂತ ನಾವು ಹತ್ತು ಪಟ್ಟು ಹೆಚ್ಚು ದೇಶಭಕ್ತರು ಎಂದು ಪವನ್‌ ಹೇಳಿದ್ದಾರೆ.

ಪವನ್‌ ಕಲ್ಯಾಣ್‌ ಸಹೋದರ ಚಿರಂಜೀವಿ ಮಾತನಾಡಿ ಮುಸ್ಲಿಮರುತಮ್ಮ ದೇಶ ಭಕ್ತಿಯನ್ನು ತೋರಿಸುವ ಅವಶ್ಯಕತೆ ಇಲ್ಲ, ಮುಸ್ಲಿಮರಿಗೂ ದೇಶದಲ್ಲಿ ಸಮಾನ ಹಕ್ಕುಗಳು ಮತ್ತು ಅವಕಾಶಗಳಿವೆ ಎಂದು ಹೇಳುವ ಮೂಲಕ ಮಾಜಿ ಕ್ರಿಕೆಟಿಗ ಅಜರುದ್ದೀನ್‌ ಮತ್ತು ಮಾಜಿರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರನ್ನು ಉದಾಹರಿಸಿದರು.

ಜನ ಸೇನಾದ ಕಾರ್ಯಕರ್ತರು ಕೋಮು ಸಂಘರ್ಷಗಳನ್ನು ತಡೆಯಬೇಕು ಎಂದುಚಿರಂಜೀವಿ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT