ಶನಿವಾರ, ಜೂಲೈ 4, 2020
24 °C

ಮಹಾರಾಷ್ಟ್ರ: ಧೂಮಪಾನ ದಂಡದ ಜತೆ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಉಗುಳುವುದು ಮಾಡಿದರೆ ದಂಡದ ಜತೆಗೆ 6 ತಿಂಗಳು ಜೈಲು ವಾಸ ಅನುಭವಿಸಬೇಕಾಗುತ್ತದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಬಾಂಬೆ ಪೊಲೀಸ್ ಕಾಯ್ದೆಯ ಈ ಸಂಬಂಧ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮಹಾರಾಷ್ಟ್ರದ ಆರೋಗ್ಯ ಇಲಾಖೆಯು ತೀರ್ಮಾನಿಸಿದೆ. ಅವರ ಪ್ರಕಾರ, ಇಂಥ ಲೋಪಗಳಿಗೆ ಮೊದಲ ಬಾರಿ ₹ 1000 ದಂಡ ವಿಧಿಸಲಿದ್ದು, ಒಂದು ದಿನ ಸಾರ್ವಜನಿಕ ಸೇವೆ ಮಾಡಬೇಕಾಗುತ್ತದೆ.

2ನೇ ಬಾರಿ ಲೋಪ ಎಸಗಿದ್ದರೆ ₹ 3000 ದಂಡ, ಮೂರು ದಿನ ಸೇವೆ ಹಾಗೂ 3ನೇ ಬಾರಿ ಲೋಪ ಎಸಗಿದ್ದರೆ, ₹ 5000 ದಂಡ ಮತ್ತು ಐದು ದಿನ ಸೇವೆ ಸಲ್ಲಿಸಬೇಕಾಗುತ್ತದೆ. ಇದರ ಜೊತೆಗೆ ಜೈಲು ಶಿಕ್ಷೆ ವಿಧಿಸಲೂ ಅವಕಾಶವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು