ಮತ್ತೆ ಗರಿಷ್ಠ ಮಟ್ಟ ತಲುಪಿದ ಇಂಧನ ಬೆಲೆ

7

ಮತ್ತೆ ಗರಿಷ್ಠ ಮಟ್ಟ ತಲುಪಿದ ಇಂಧನ ಬೆಲೆ

Published:
Updated:
Deccan Herald

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸೋಮವಾರ ಮತ್ತೊಂದು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿರುವುದು ಮತ್ತು ಕಚ್ಚಾ ತೈಲಬೆಲೆ ಏರಿಕೆಯಾಗಿರುವುದೇ ಇಂಧನ ಬೆಲೆ ಏರಲು ಕಾರಣವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ₹79.15 ಇದ್ದರೆ, ಡೀಸೆಲ್‌ ದರ ಲೀಟರ್‌ಗೆ ₹71.15ಗೆ ಮುಟ್ಟಿದೆ. ಸೋಮವಾರ ಲೀಟರ್‌ಗೆ 31 ಪೈಸೆ ಏರಿಕೆಯಾಗಿದೆ.

ಮೇ 28 ರಂದು ಪೆಟ್ರೋಲ್‌ ಬೆಲೆ ಲೀಟರ್‌ಗೆ ₹78.43 ಆಗಿತ್ತು. ಆಗಸ್ಟ್‌ 16 ರಿಂದ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹2 ಏರಿದೆ. ಡೀಸೆಲ್‌ ಸಹ ₹2.42 ಏರಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 11

  Angry

Comments:

0 comments

Write the first review for this !