ಗಡಿಪಾರು ತಡೆ ಕೋರಿ ರೊಹಿಂಗ್ಯಾ ನಿರಾಶ್ರಿತರ ಅರ್ಜಿ

6

ಗಡಿಪಾರು ತಡೆ ಕೋರಿ ರೊಹಿಂಗ್ಯಾ ನಿರಾಶ್ರಿತರ ಅರ್ಜಿ

Published:
Updated:

ನವದೆಹಲಿ: ಅಸ್ಸಾಂನ ಸಿಲ್ಚಾರ್‌ ಜೈಲಿನಲ್ಲಿರುವ ಏಳು ಮಂದಿಯನ್ನು ಭಾರತದಿಂದ ಮ್ಯಾನ್ಮಾರ್‌ಗೆ ಗಡಿಪಾರು ಮಾಡದಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ರೊಹಿಂಗ್ಯಾ ನಿರಾಶ್ರಿತರು ಬುಧವಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ನಡುವೆ, ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ಏಳು ಮಂದಿ ನಿರಾಶ್ರಿತರನ್ನು ಗುರುವಾರ ಮ್ಯಾನ್ಮಾರ್‌ಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2012ರಿಂದ ಮಣಿಪುರ ಗಡಿಯಲ್ಲಿ ನೆಲೆಸಿದ್ದ ಏಳು ಮಂದಿಯನ್ನು ಈಚೆಗೆ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

‘ಮ್ಯಾನ್ಮಾರ್‌ನಲ್ಲಿ ಸದ್ಯ ಕೆಟ್ಟ ಪರಿಸ್ಥಿತಿ ಇದೆ. ದೇಶಕ್ಕೆ ಹಿಂತಿರುಗುವವರನ್ನು ಹಿಂಸಿಸುವ ಇಲ್ಲವೇ ಕೊಲೆ ಮಾಡುವ ಸಾಧ್ಯತೆ ಇದೆ ಎಂದು ನಿರಾಶ್ರಿತ ಮೊಹಮದ್‌ ಸಲೀಮುಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !