ಮುಜಫ್ಫರ್‌ಪುರ ಪ್ರಕರಣ: ಹೈಕೋರ್ಟ್ ಆದೇಶ ಪ್ರಶ್ನಿಸಿ ‘ಸುಪ್ರೀಂ’ನಲ್ಲಿ ಅರ್ಜಿ

7
ಮಾಧ್ಯಮ ವರದಿಗಳ ನಿರ್ಬಂಧ ಪ್ರಶ್ನಿಸಿರುವ ಪತ್ರಕರ್ತ

ಮುಜಫ್ಫರ್‌ಪುರ ಪ್ರಕರಣ: ಹೈಕೋರ್ಟ್ ಆದೇಶ ಪ್ರಶ್ನಿಸಿ ‘ಸುಪ್ರೀಂ’ನಲ್ಲಿ ಅರ್ಜಿ

Published:
Updated:

ನವದೆಹಲಿ: ಮುಜಫ್ಫರ್‌ಪುರ ವಸತಿಗೃಹದಲ್ಲಿ ಯುವತಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎನ್ನುವ ಪ್ರಕರಣದ ತನಿಖೆ ಕುರಿತು ಮಾಧ್ಯಮಗಳು ವರದಿ ಮಾಡುವುದನ್ನು ತಡೆಹಿಡಿದಿರುವ ಪಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ, ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಪ್ರಕರಣದ ತನಿಖೆ ಕುರಿತು ನಿಗಾ ವಹಿಸಿರುವ ಹೈಕೋರ್ಟ್, ತನಿಖೆಯ ವಿವರ ಸೋರಿಕೆಯಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. ತನಿಖೆಗೆ ಹಾನಿ ಆಗಬಹುದು ಎನ್ನುವ ಕಾರಣದಿಂದ ವಿವರಗಳನ್ನು ಪ್ರಕಟಿಸದಂತೆ ಆಗಸ್ಟ್ 23ರಂದು ಆದೇಶ ನೀಡಿತ್ತು.

‘ಮಾಧ್ಯಮದ ವರದಿಗಳಿಂದ ತನಿಖೆಗೆ ಹಾನಿ ಉಂಟಾಗುತ್ತಿದೆ ಎನ್ನುವುದನ್ನು ಸಾಬೀತುಪಡಿಸುವಂತಹ ಯಾವುದೇ ದಾಖಲೆಗಳು ಹೈಕೋರ್ಟ್ ಬಳಿ ಇಲ್ಲ. ಹೈಕೋರ್ಟ್ ಆದೇಶದಿಂದಾಗಿ, ಸಮಾಜದಲ್ಲಿನ ಬೆಳವಣಿಗೆಗಳನ್ನು ತಿಳಿದುಕೊಳ್ಳುವ ಜನರ ಹಕ್ಕು ಹಾಗೂ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಉಂಟುಮಾಡಿದಂತಾಗುತ್ತದೆ’ ಎಂದು ಪತ್ರಕರ್ತರೊಬ್ಬರು ಸಲ್ಲಿಸಿರುವ ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮಾಧ್ಯಮ ಸಕ್ರಿಯ ಪಾತ್ರ ವಹಿಸಿದ್ದಕ್ಕಾಗಿಯೇ ಈ ‘ಆಘಾತಕಾರಿ ಪ್ರಕರಣ’ ಬಹಿರಂಗವಾಗಿದ್ದು ಎಂದು ಸಹ ಅರ್ಜಿದಾರರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !