ಚೆಂಗನ್ನೂರಿನಲ್ಲಿ ಜಲ ಪ್ರಳಯ: ಹೆಲಿಕಾಪ್ಟರ್ ಕಳಿಸಿ ಎಂದು ಕಣ್ಣೀರಿಟ್ಟ ಶಾಸಕ

7

ಚೆಂಗನ್ನೂರಿನಲ್ಲಿ ಜಲ ಪ್ರಳಯ: ಹೆಲಿಕಾಪ್ಟರ್ ಕಳಿಸಿ ಎಂದು ಕಣ್ಣೀರಿಟ್ಟ ಶಾಸಕ

Published:
Updated:

ಆಲಪ್ಪುಳ: 'ದಯಮಾಡಿ ನಮಗೆ ಹೆಲಿಕಾಪ್ಟರ್ ಕೊಡಿ. ನಾನು ನಿಮ್ಮ ಕಾಲು ಹಿಡಿದು ಬೇಡುತ್ತಿದ್ದೇನೆ, ನಮಗೆ ಸಹಾಯ ಮಾಡಿ. ನನ್ನೂರಿನ ಜನರು ಸತ್ತು ಹೋಗುತ್ತಾರೆ, ನಮಗೆ ಸಹಾಯ ಮಾಡಿ, ಏರ್ ಲಿಫ್ಟಿಂಗ್ ಅಲ್ಲದೆ ಬೇರೆ ಯಾವ ದಾರಿಯೂ ಇಲ್ಲ. ಮೀನು ಹಿಡಿಯುವ ದೋಣಿ ಬಳಸಿ ನಮ್ಮಿಂದಾದ ರಕ್ಷಣಾ ಕಾರ್ಯ ಮಾಡುತ್ತಿದ್ದೇವೆ. ನಮಗೆ ಇಲ್ಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ, ಇಲ್ಲಿಗೆ ಸೇನೆಯನ್ನು ಕಳುಹಿಸಿ. ನಾವು ಸತ್ತು ಹೋಗುತ್ತಿದ್ದೇವೆ, ನಮಗೆ ಸಹಾಯ ಮಾಡಿ.'
ಚೆಂಗನ್ನೂರಿನ ಶಾಸಕ ಸಜಿ ಚೆರಿಯಾನ್ ಅವರ ಫೇಸ್‍ಬುಕ್ ಪೋಸ್ಟ್ ಇದು.

ಕೇರಳದಲ್ಲಿ ಜಲ ಪ್ರಳಯಕ್ಕೆ ಚೆಂಗನ್ನೂರ್ ತತ್ತರಿಸಿ ಹೋಗಿದೆ, ಶುಕ್ರವಾರ ಸಂಜೆ ಇಲ್ಲಿನ ಎಲ್ಲ ಪ್ರದೇಶಗಳು ಜಲಾವೃತವಾಗಿದ್ದು, ಸಹಾಯಕ್ಕಾಗಿ ಜನರು ಮೊರೆಯಿಡುತ್ತಿದ್ದಾರೆ.
ಪ್ರವಾಹದ ಸ್ಥಿತಿಗತಿಗಳ ಬಗ್ಗೆ ಏಷ್ಯಾನೆಟ್ ವಾಹಿನಿಗೆ ಪ್ರತಿಕ್ರಿಯೆ ನೀಡಿದಾಗ ಸಜಿ ಚೆರಿಯಾನ್ ಕಣ್ಣೀರಿಟ್ಟಿದ್ದಾರೆ,.

ಇಲ್ಲಿಗೆ ಹೆಲಿಕಾಪ್ಟರ್ ಕಳಿಸಿಕೊಡಿ, ಯಾರಿಗಾದರೂ ಹೇಳಿ. ಮೋದಿಯವರಿಗೆ ಹೇಳಿ. ಇಲ್ಲಿ ಹೆಲಿಕಾಪ್ಟರ್ ಬರದೇ ಇದ್ದರೆ ನಾವು ಸತ್ತು ಹೋಗುತ್ತೇವೆ. 50000 ಮಂದಿ ಸಾಯುತ್ತಾರೆ. ನಿಮ್ಮ ಸಹಾಯ ಬೇಡುತ್ತಿದ್ದೇನೆ ಎಂದು ಸಜಿ ಸುದ್ದಿವಾಹಿನಿಯಲ್ಲಿ ಅಳುತ್ತಾ ಮನವಿ ಮಾಡಿದ್ದಾರೆ.

ಆಲಪ್ಪುಳ ಜಿಲ್ಲೆಯ ಚೆಂಗನ್ನೂರಿನಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು, ರಕ್ಷಣಾ ಕಾರ್ಯಗಳಿಗೆ ಅಡಚಣೆಯುಂಟಾಗಿದೆ, ಅಲ್ಲಿರುವ ಜನರ ರಕ್ಷಣೆಗಾಗಿ ಸೇನಾಪಡೆ ಹರ ಸಾಹಸ ಪಡುತ್ತಿದೆ.
 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 1

  Sad
 • 2

  Frustrated
 • 3

  Angry

Comments:

0 comments

Write the first review for this !