ಮೋರಿ ಗ್ಯಾಸ್‌ನಿಂದ ಚಹಾ ತಯಾರಿಸುವ ಮುನ್ನ ಘಟಿಸಿದ ಅದ್ಭುತ ತಂತ್ರಜ್ಞಾನಗಳ ಪಟ್ಟಿ!

7
ಬಿಜೆಪಿ ನಾಯಕರ ವಿಜ್ಞಾನ ಸಮೀಕರಣ

ಮೋರಿ ಗ್ಯಾಸ್‌ನಿಂದ ಚಹಾ ತಯಾರಿಸುವ ಮುನ್ನ ಘಟಿಸಿದ ಅದ್ಭುತ ತಂತ್ರಜ್ಞಾನಗಳ ಪಟ್ಟಿ!

Published:
Updated:

ಬೆಂಗಳೂರು: ‘ಮೋರಿಯ ದುರ್ಗಂಧಭರಿತ ಅನಿಲದ ಸಹಾಯದಿಂದ ವ್ಯಕ್ತಿಯೊಬ್ಬ ಚಹಾ ತಯಾರಿಸುತ್ತಿದ್ದ’ ಎಂಬ ‍ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದೆ.

ವಿಶ್ವ ಜೈವಿಕ ಇಂಧನ ದಿನದ (ಆಗಸ್ಟ್ 10) ಅಂಗವಾಗಿ ಮಾತನಾಡಿದ್ದ ಮೋದಿ ಅವರು, ಮೋರಿಯ ಅನಿಲದ ಸಹಾಯದಿಂದ ಚಹಾ ತಯಾರಿಸುವ ವ್ಯಕ್ತಿಯ ಬಗ್ಗೆ ಉಲ್ಲೇಖಿಸಿದ್ದರು.

‘ಸಣ್ಣ ನಗರವೊಂದರಲ್ಲಿ ಚಹಾ ಮಾರಾಟ ಮಾಡುವ ವ್ಯಕ್ತಿಯೊಬ್ಬ ಮೋರಿಯೊಂದರ ಬಳಿ ಚಹಾ ತಯಾರಿಸುತ್ತಿದ್ದ. ಪ್ರತಿ ದಿನ ಅಲ್ಲಿಗೆ ಬರುವ ಆತ ಮೋರಿಯೊಳಗೆ ಪೈಪ್ ತೂರಿಸಿ ಅದನ್ನು ನೇರವಾಗಿ ತನ್ನ ಸ್ಟೌಗೆ ಸಿಕ್ಕಿಸಿಕೊಳ್ಳುತ್ತಿದ್ದ. ಮೋರಿಯ ದುರ್ಗಂಧದಿಂದ ಸೂಸುವ ಅನಿಲದ ಸಹಾಯದಿಂದ ಸ್ಟೌ ಉರಿಸಿ ಚಹಾ ತಯಾರಿಸುತ್ತಿದ್ದ. ಒಂದು ದಿನ ಸಂಜೆ ಆತ ಟ್ರ್ಯಾಕ್ಟರ್‌ನ ಟ್ಯೂಬ್ ಒಂದನ್ನು ಗಾಡಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ. ಅದರೊಳಗೆ ಏನಿದೆ ಎಂದು ಕೇಳಿದಾಗ, ಮೋರಿಯಲ್ಲಿನ ಅನಿಲವನ್ನು ಟ್ಯೂಬ್‌ನಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದಾಗಿ ಹೇಳಿದ. ಮನೆಯಲ್ಲಿ ಎರಡು ಗೋವುಗಳಿದ್ದು, ಅವುಗಳ ಸೆಗಣಿಯನ್ನೂ ಬಳಸಿಕೊಂಡು ಅನಿಲ ತಯಾರಿಸುವ ಘಟಕ ಸಿದ್ಧಪಡಿಸಿರುವುದಾಗಿ ತಿಳಿಸಿದ. ಅಲ್ಲದೆ, ಅದರ ಸಹಾಯದಿಂದ ಮನೆಯಲ್ಲಿ ಅಡುಗೆ ಮಾಡುವುದಾಗಿ ಹೇಳಿದ. ನಮ್ಮ ದೇಶದ ರೈತನೊಬ್ಬನ ಚಿಂತನೆಯ ಬಗ್ಗೆ ಕಲ್ಪನೆ ಮಾಡಿ’ ಎಂದು ಮೋದಿ ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ, ವ್ಯಂಗ್ಯ, ತಮಾಷೆಯ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.

ಮೋದಿಯವರು ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ‘ಪುರಾಣ ಕಾಲದಲ್ಲೇ ವಂಶವಾಹಿ ವಿಜ್ಞಾನ ಇತ್ತು. ಹಿಂದೂ ದೇವರು ಗಣಪತಿಗೆ ಆನೆಯ ತಲೆ ಜೋಡಿಸಿದ್ದಾಗಲೇ ಪ್ಲಾಸ್ಟಿಕ್ ಸರ್ಜರಿಯೂ ಅಸ್ತಿತ್ವದಲ್ಲಿತ್ತು’ ಇತ್ಯಾದಿ ಹೇಳಿಕೆಗಳನ್ನು ಈ ಹಿಂದೆ ನೀಡಿದ್ದಲ್ಲದೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಇದೇ ರೀತಿ ಬಿಜೆಪಿಯ ಇತರ ಅನೇಕ ನಾಯಕರೂ ಆಧುನಿಕ ವಿಜ್ಞಾನ ಪುರಾಣ ಕಾಲದಲ್ಲೇ ಅಸ್ತಿತ್ವಕ್ಕೆ ಬಂದಿತ್ತು ಎಂಬಂತೆ ಮಾತನಾಡಿದ್ದಾರೆ. ಚರ್ಚೆಗೆ ಗ್ರಾಸವಾಗಿದ್ದ ಅಂತಹ ಹೇಳಿಕೆಗಳನ್ನು ಚುರುಮುರಿ ಬ್ಲಾಗ್ ಪಟ್ಟಿ ಮಾಡಿದೆ.

* ಮಹಾಭಾರತದ ‘ಕರ್ಣ’ ತಾಯಿಯ ಗರ್ಭದಿಂದ ಹುಟ್ಟಿದ್ದಲ್ಲ ಎಂಬುದು ಕತೆಯಲ್ಲಿದೆ. ಆತ ತಾಯಿಯ ಗರ್ಭದ ಸಹಾಯವಿಲ್ಲದೇ ಜನಿಸುವುದು ಹೇಗೆ ಸಾಧ್ಯವಾಯಿತು? ಆ ಕಾಲದಲ್ಲೇ ವಂಶವಾಹಿ ವಿಜ್ಞಾನ ಅಸ್ತಿತ್ವದಲ್ಲಿತ್ತೇ? ಉತ್ತರಕ್ಕೆ: ಇಲ್ಲಿ ಕ್ಲಿಕ್ಕಿಸಿ

* ‘ಮಹಾಭಾರತ ಕಾಲದಲ್ಲೇ ಅಂತರ್ಜಾಲ ಮತ್ತು ಉಪಗ್ರಹ ಸಂವಹ ವ್ಯವಸ್ಥೆ ಇತ್ತು. ಅದರ ಸಹಾಯದಿಂದಲೇ ಅಂಧ ಧೃತರಾಷ್ಟ್ರ ಮಹಾರಾಜನಿಗೆ ಸಂಜಯ ಯುದ್ಧದ ಸನ್ನಿವೇಶವನ್ನು ವಿವರಿಸಿದ್ದ. ಸಂಜಯನ ಕಣ್ಣುಗಳ ಮೂಲಕ ಧೃತರಾಷ್ಟ್ರ ಯುದ್ಧ ನೋಡಿದ್ದು ಹೇಗೆ?’ ಉತ್ತರಕ್ಕೆ: ಇಲ್ಲಿ ಕ್ಲಿಕ್ಕಿಸಿ

* ‘ಚಾರ್ಲ್ಸ್ ಡಾರ್ವಿನ್‌ ಅವರ 'ಮಾನವ ವಿಕಾಸ' ಸಿದ್ಧಾಂತ ವೈಜ್ಞಾನಿಕವಾಗಿ ತಪ್ಪು. ಮಾನವ ಭೂಮಿ ಮೇಲೆ ಕಾಣಿಸಿಕೊಂಡಂದಿನಿಂದ ಮಾನವನಾಗಿಯೇ ಇದ್ದಾನೆ. ಮಂಗ ಮಾನವನಾಗಿ ಪರಿವರ್ತನೆಗೊಂಡಿದ್ದನ್ನು ನೋಡಿದ್ದೇವೆ ಎಂದು ನಮ್ಮ ಪೂರ್ವಿಕರು ಲಿಖಿತ ಅಥವಾ ಮೌಖಿಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲವಂತೆ’, ಹೌದೇ? ಉತ್ತರಕ್ಕೆ: ಇಲ್ಲಿ ಕ್ಲಿಕ್ಕಿಸಿ

* ಆಮ್ಲಜನಕ ಸೇವಿಸಿ ಆಮ್ಲಜನಕವನ್ನೇ ಹೊರ ಬಿಡುವ ಪ್ರಾಣಿ ಗೋವು ಹೌದೇ? ಉತ್ತರಕ್ಕೆ: ಇಲ್ಲಿ ಕ್ಲಿಕ್ಕಿಸಿ

* 'ಸಿವಿಲ್ ಎಂಜಿನಿಯರ್‌ಗಳು ನಾಗರಿಕ ಸೇವಾ ಕ್ಷೇತ್ರ ಪ್ರವೇಶಿಸಿದರೆ ಅವರು ಕಟ್ಟಡ ನಿರ್ಮಾಣ ಯೋಜನೆಗಳಿಗೆ ಸಹಾಯ ಮಾಡಬಲ್ಲರು. ಮೆಕಾನಿಕಲ್ ಎಂಜಿನಿಯರ್‌ಗಳಿಂದ ಅದು ಸಾಧ್ಯವಾಗದು.' ಹೌದೇ? ಉತ್ತರಕ್ಕೆ: ಇಲ್ಲಿ ಕ್ಲಿಕ್ಕಿಸಿ

* ಜಾನ್ ಲೋಗಿ ಬೈರ್ಡ್ ಟಿವಿ ಅನ್ವೇಷಿಸಿದ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದು. ಆದರೆ, ಮಹಾಭಾರತ ಕಾಲದಲ್ಲೇ ದಿವ್ಯಜ್ಞಾನದ ಮೂಲಕ ಟಿವಿ ನೋಡಬಹುದಿತ್ತಂತೆ. ಪ್ರಣಾಳ ಶಿಶು ಪರಿಕಲ್ಪನೆಯೂ ಇತ್ತಂತೆ. ಹೌದೇ? ಉತ್ತರಕ್ಕೆ: ಇಲ್ಲಿ ಕ್ಲಿಕ್ಕಿಸಿ 

* ‘ನಿಮ್ಮ ಗೂಗಲ್ ಈಷ್ಟೇ ಆರಂಭವಾಗಿದೆ. ನಮ್ಮದು ಬಹಳ ಹಿಂದೆಯೇ ಶುರುವಾಗಿತ್ತು. ‘ನಾರಾಯಣ’ ಎಂದು ಮೂರು ಬಾರಿ ಹೇಳುತ್ತಾ ಲೋಕಸಂಚಾರ ನಡೆಸುತ್ತಿದ್ದ ನಾರದ ಮುನಿಗಳೇ ನಮ್ಮ ಗೂಗಲ್’ ಎಂದು ವಿಜಯ್ ರೂಪಾಣಿ ಹೇಳಿದ್ದರು. ಹೌದೇ? ಉತ್ತರಕ್ಕೆ: ಇಲ್ಲಿ ಕ್ಲಿಕ್ಕಿಸಿ 

* ‘ಪುರಾಣ ಕತೆಯಲ್ಲಿ ಬರುವ ಭಗವಾನ್ ಶ್ರೀಕೃಷ್ಣ ಮತ್ತು ಆತನ ಬಾಲ್ಯ ಸ್ನೇಹಿತ ಸುಧಾಮ ಆ ಕಾಲದಲ್ಲೇ ನಗದುರಹಿತ ವ್ಯವಹಾರ ನಡೆಸಿದ್ದರಂತೆ!’ ಹೌದೇ? ಉತ್ತರಕ್ಕೆ: ಇಲ್ಲಿ ಕ್ಲಿಕ್ಕಿಸಿ

* ‘ನಾವು ದೇವರು ಗಣೇಶನನ್ನು ಪೂಜಿಸುತ್ತೇವೆ. ಆ ಕಾಲದಲ್ಲಿ ಗಣಪತಿಗೆ ಆನೆಯ ತಲೆಯನ್ನು ಜೋಡಿಸಬೇಕಾದರೆ ಪ್ಲಾಸ್ಟಿಕ್‌ ಸರ್ಜರಿ ತಂತ್ರಜ್ಞಾನ ಅಸ್ತಿತ್ವದಲ್ಲಿದ್ದಿರಬೇಕು.’ ಇದು ಪ್ರಧಾನಿ ನರೇಂದ್ರ ಮೋದಿಯವರು 2014ರ ಅಕ್ಟೋಬರ್‌ನಲ್ಲಿ ರಿಲಾಯನ್ಸ್‌ ಆಸ್ಪತ್ರೆ ಉದ್ಘಾಟನೆ ಸಂದರ್ಭ ನೀಡಿದ್ದ ಹೇಳಿಕೆ.

* ‘ಬೀಜ ಗಣಿತ, ಪೈಥಾಗರಸ್‌ ಸಿದ್ಧಾಂತವನ್ನು ನಮ್ಮ ವಿಜ್ಞಾನಿಗಳೇ ಅನ್ವೇಷಿಸಿದ್ದಾರೆ. ಆದರೆ, ಅದರ ಶ್ರೇಯಸ್ಸನ್ನು ನಾವು ವಿದೇಶಿ ವಿಜ್ಞಾನಿಗಳಿಗೆ ನೀಡುತ್ತಿದ್ದೇವೆ. ಅರಬರಿಗಿಂತಲೂ ನಮ್ಮವರಿಗೆ ಬೀಜಗಣಿತ ಗೊತ್ತಿತ್ತು ಎಂಬುದು ನಮಗೆಲ್ಲ ತಿಳಿದಿದೆ’ ಎಂದು ಕೇಂದ್ರ ಸಚಿವ ಹರ್ಷವರ್ಧನ್ 2015ರ ಜನವರಿಯಲ್ಲಿ ಹೇಳಿದ್ದರು.

ಬರಹ ಇಷ್ಟವಾಯಿತೆ?

  • 10

    Happy
  • 16

    Amused
  • 1

    Sad
  • 2

    Frustrated
  • 5

    Angry

Comments:

0 comments

Write the first review for this !