ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕರ ಹೆಬ್ಬಾಗಿಲು ಮುಚ್ಚಿದ್ದು ನರೇಂದ್ರ ಮೋದಿ: ಅಮಿತ್ ಶಾ

Last Updated 31 ಅಕ್ಟೋಬರ್ 2019, 5:22 IST
ಅಕ್ಷರ ಗಾತ್ರ

ನವದೆಹಲಿ: ಸಂವಿಧಾನದ 370ನೇ ವಿಧಿ ಮತ್ತು 35ಎ ಕಲಂ ರದ್ದುಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದಲ್ಲಿ ಭಯೋತ್ಪಾದಕರಿಗೆ ಇದ್ದ ಹೆಬ್ಬಾಗಿಲು ಮುಚ್ಚಿಬಿಟ್ಟರು ಎಂದುಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ದೇಶದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್‌ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ದಾರ್ ಪಟೇಲರು ದೇಶದಲ್ಲಿದ್ದ 550 ಸಂಸ್ಥಾನಗಳನ್ನು ಒಗ್ಗೂಡಿಸುವ ಮೂಲಕ ದೇಶದ ಏಕೀಕರಣಕ್ಕೆ ಕಾರಣಪುರುಷರಾದರು. ಆದರೆ ಅವರಿಗೆ ಜಮ್ಮು ಮತ್ತು ಕಾಶ್ಮೀರದ ವಿಚಾರದ ಬಗ್ಗೆ ಪಶ್ಚಾತ್ತಾಪಪವಿತ್ತು ಎಂದು ಶಾ ವಿಶ್ಲೇಷಿಸಿದರು.

ಭಾರತದ ಜೊತೆಗೆ ಜಮ್ಮು ಮತ್ತು ಕಾಶ್ಮೀರ ಸೇರಿಕೊಂಡಿತ್ತು. ಆದರೆ 370ನೇ ವಿಧಿ ಮತ್ತು 35ಎ ಕಲಂ ಕಾರಣದಿಂದ ಆ ರಾಜ್ಯದ ನಿರ್ವಹಣೆ ದೊಡ್ಡ ಸಮಸ್ಯೆಯಾಗಿತ್ತು ಎಂದು ಅವರು ಹೇಳಿದರು.

ಬುಧವಾರ ಮಧ್ಯರಾತ್ರಿಯಷ್ಟೇ ಜಮ್ಮು ಮತ್ತು ಕಾಶ್ಮೀರ ತನಗಿದ್ದ ರಾಜ್ಯದ ಸ್ಥಾನಮಾನ ಕಳೆದುಕೊಂಡು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ರೂಪುಗೊಂಡಿದೆ. ಈ ಬೆಳವಣಿಗೆಯಾದ ಕೆಲವೇ ಗಂಟೆಗಳ ನಂತರ ಗೃಹ ಸಚಿವರ ಈ ಹೇಳಿಕೆ ಹೊರಬಿದ್ದಿರುವುದು ಎಲ್ಲರ ಗಮನ ಸೆಳೆದಿದೆ.

ನಾವು ಭಾರತದ ಭೂಪಟವಾಗಿ ಏನನ್ನು ನೋಡುತ್ತೇವೆಯೋ ಅದು ಸರ್ದಾರ್ ಪಟೇಲರ ಕೊಡುಗೆ. 550 ಸಂಸ್ಥಾನಗಳಾಗಿ ಹಂಚಿಹೋಗಿದ್ದ ದೇಶವನ್ನು ಪಟೇಲರ ಪರಿಶ್ರಮ ಒಂದುಗೂಡಿಸಿತು. ಕಳೆದ 70 ವರ್ಷಗಳಿಂದ ಈ 370ನೇ ವಿಧಿ ಮತ್ತು 35ಎ ಕಲಂ ರದ್ದುಪಡಿಸಬೇಕು ಎಂದು ಯಾರೂ ಯೋಚಿಸಿರಲಿಲ್ಲ. ದೇಶದ ಜನರು ನರೇಂದ್ರ ಮೋದಿ ಅವರಿಗೆ ಅಧಿಕಾರದ ಚುಕ್ಕಾಣಿ ನೀಡಿದ ನಂತರಆಗಸ್ಟ್‌ 5ರಂದು ಸಂಸತ್ತು 370ನೇ ವಿಧಿ ಮತ್ತು 35ಎ ಕಲಂ ರದ್ದುಪಡಿಸಿತು ಎಂದು ನುಡಿದರು.

2014ರಿಂದಲೂ ಮೋದಿ ಸರ್ಕಾರವು ಸರ್ದಾರ್ ಪಟೇಲರ ಜನ್ಮದಿನವಾದಅಕ್ಟೋಬರ್‌ 31ನೇ ತಾರೀಖನ್ನು ರಾಷ್ಟ್ರೀಯ ಏಕತಾ ದಿವಸವಾಗಿ ಆಚರಿಸುತ್ತಿದೆ ಎಂದು ಹೇಳಿದರು.

ಇಂಡಿಯಾಗೇಟ್‌ನ ಅಮರ್‌ಜವಾನ್ ಜ್ಯೋತಿಯಿಂದ ಆರಂಭವಾದ ಮ್ಯಾರಾಥಾನ್‌ನಲ್ಲಿಶಾಲಾ ಮಕ್ಕಳು, ನಿವೃತ್ತ ಸೈನಿಕರೂ ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT