ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ಯುದ್ಧ ಟ್ಯಾಂಕ್‌ ನಿರ್ಮಿಸುವ ದೇಶದ ಮೊದಲ ಖಾಸಗಿ ಘಟಕ

Last Updated 19 ಜನವರಿ 2019, 14:35 IST
ಅಕ್ಷರ ಗಾತ್ರ

ಹಜಿರಾ: ಭಾರತೀಯ ಸೇನೆಗೆ ಬೇಕಾದ ಯುದ್ಧ ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ದೇಶದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆ ಪಡೆದ ಎಲ್ಆ್ಯಂಡ್‌ಟಿ ಶಸ್ತಾಸ್ತ್ರ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು.

ಗುಜರಾತ್‌ನಲ್ಲಿರುವಲಾರ್ಸೆನ್‌ ಆ್ಯಂಡ್‌ ಟುರ್ಬೊ ಘಟಕದಲ್ಲಿ ‘ಕೆ9 ವಜ್ರ’ ಹೌವಿಟ್ಜರ್‌ ಸೆಲ್ಫ್‌ ಪ್ರೊಪೆಲ್ಡ್‌ ಗನ್‌ ಸಿಸ್ಟಮ್‌ ನಿರ್ಮಿಸಲಾಗುತ್ತಿದೆ.ಯುದ್ಧ ಟ್ಯಾಂಕ್‌ನಂತಯೇ ಕಾಣುವ, ಅದಕ್ಕಿಂತಲೂ ಹಗುರವಾದ ಈ ವ್ಯವಸ್ಥೆಯನ್ನು ಯುದ್ಧ ಟ್ಯಾಂಕ್‌ ನಿಶ್ಕ್ರಿಯಗೊಳಿಸಲು ಬಳಸಲಾಗುತ್ತದೆ. ಪ್ರಧಾನಿ ಮೋದಿ ‘ಕೆ9 ವಜ್ರ’ ಟ್ಯಾಂಕ್‌ ಏರಿದ್ದು ಗಮನ ಸೆಳೆಯಿತು.

’ಕೆ9 ವಜ್ರ’–ಟಿ 155ಎಂಎಂ/52– ಸೆಲ್ಫ್‌ ಪ್ರೊಪೆಲ್ಡ್‌ ಗನ್‌ ಸಿಸ್ಟಮ್‌ನ ನೂರು ಟ್ಯಾಂಕ್‌ಗಳನ್ನು ಪೂರೈಸಲು ರಕ್ಷಣಾ ಸಚಿವಾಲಯವು 2017ರಲ್ಲಿ ಎಲ್‌ಆ್ಯಂಡ್‌ಟಿ ಸಂಸ್ಥೆಯೊಂದಿಗೆ ₹4,500 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತೀಯ ಸೇನೆಗೆಎಲ್ಆ್ಯಂಡ್‌ಟಿ,ಯುದ್ಧ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿಕೊಡಲಿದೆ.

ದೇಶದ ರಕ್ಷಣಾ ವಲಯಕ್ಕೆ ಹಾಗೂ ರಕ್ಷಣೆಗೆ ಅತ್ಯುತ್ತಮವಾದ ಕೊಡುಗೆಯಾಗಿದೆ ಎಂದು ಪ್ರಧಾನಿ ಮೋದಿ ಸಂಸ್ಥೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಶಸ್ತಾಸ್ತ್ರ ಘಟಕದಲ್ಲಿ ಪ್ರಧಾನಿ ಮೋದಿ ಟ್ಯಾಂಕ್ ಗಮನಿಸುತ್ತ, ಒಳಗೆ ಹೊಕ್ಕು ಮೇಲಕ್ಕೇರಿ ನಿಂತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಸೂರತ್‌ನಿಂದ 30 ಕಿ.ಮೀ. ದೂರದಲ್ಲಿರುವ ಹಜಿರಾದಲ್ಲಿ ಶಸ್ತ್ರಾಸ್ತ್ರ ನಿರ್ಮಾಣ ಘಟಕವನ್ನು ಸ್ಥಾಪಿಸಲಾಗಿದೆ. ಹೌವಿಟ್ಜರ್‌ ಟ್ಯಾಂಕ್‌, ಸುಸಜ್ಜಿತ ಪೂರ್ಣ ಪ್ರಮಾಣದ ಯುದ್ಧ ಟ್ಯಾಂಕ್‌ ನಿರ್ಮಾಣಕ್ಕೂ ಅಗತ್ಯ ವ್ಯವಸ್ಥೆಯನ್ನು ಇಲ್ಲಿ ರೂಪಿಸಲಾಗಿದೆ. ಎಲ್‌ಆ್ಯಂಡ್‌ಟಿಯ 755 ಎಕರೆ ಉತ್ಪಾದನಾ ಘಟಕದ ಪೈಕಿ 40 ಎಕರೆ ಪ್ರದೇಶದಲ್ಲಿ ಟ್ಯಾಂಕ್‌ ನಿರ್ವಹಿಸುವ ಕಾರ್ಯ ನಡೆಯುತ್ತಿದೆ.

ಒಟ್ಟು ನೂರು ‘ಕೆ9 ವಜ್ರ’ ಹೌವಿಟ್ಜರ್‌ ಟ್ಯಾಂಕ್‌ಗಳನ್ನು 42 ತಿಂಗಳಲ್ಲಿ ಪೂರೈಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ದೇಶದ ರಕ್ಷಣಾ ಸಚಿವಾಲಯ ಇದೇ ಮೊದಲ ಬಾರಿಗೆ ದೊಡ್ಡ ಮೊತ್ತದ ಶಸ್ತ್ರಾಸ್ತ್ರ ನಿರ್ಮಾಣ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡಿದೆ. ದಕ್ಷಿಣ ಕೊರಿಯಾದ ಹನ್‌ವ್ಹಾ ಕಾರ್ಪೊರೇಷನ್‌ನಿಂದ ಶಸ್ತ್ರಾಸ್ತ್ರ ನಿರ್ಮಾಣ ತಂತ್ರಜ್ಞಾನವನ್ನು ಎಲ್‌ಆ್ಯಂಡ್‌ಟಿ ವರ್ಗಾಯಿಸಿಕೊಂಡಿದೆ.

ಟ್ಯಾಂಕ್‌ನಂತೆ ಕಾಣುವ ಈ ದೊಡ್ಡ ಗಾತ್ರದ ಬಂದೂಕು 50 ಟನ್‌ ತೂಕವಿದ್ದು, 47 ಕೆಜಿ ಬಾಂಬ್‌ಗಳನ್ನು 43 ಕಿ.ಮೀ. ದೂರದ ಗುರಿಯತ್ತ ನುಗ್ಗಿಸುವ ಸಾಮರ್ಥ್ಯ ಹೊಂದಿದೆ. ನೂರು ಟ್ಯಾಂಕ್‌ಗಳ ಪೈಕಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 10 ಟ್ಯಾಂಕ್‌ಗಳನ್ನು ಪೂರೈಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT