ಮೋದಿಗೆ ಸಾಟಿಯೇ ಇಲ್ಲ: ಜೇಟ್ಲಿ

ಸೋಮವಾರ, ಮಾರ್ಚ್ 25, 2019
28 °C

ಮೋದಿಗೆ ಸಾಟಿಯೇ ಇಲ್ಲ: ಜೇಟ್ಲಿ

Published:
Updated:
Prajavani

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಎದುರಲ್ಲಿ ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್‌ ಅವರೇ ಪರಕೀಯ ಭಾವ ಅನುಭವಿಸಿದ್ದರು’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಬಣ್ಣಿಸಿದರು.

ಮೋದಿ ಅವರ ಆಯ್ದ ಭಾಷಣಗಳನ್ನು ಒಳಗೊಂಡಿರುವ ‘ಸಬ್‌ಕಾ ಸಾತ್, ಸಬ್‌ಕಾ ವಿಕಾಸ್’ ಪುಸ್ತಕದ ಐದು ಸಂಚಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಮೋದಿ ಅವರ ಅನುಭವ ಮತ್ತು ತಿಳಿವಳಿಕೆ ಅಪಾರವಾದುದು. ಸಾಮಾನ್ಯ ರಾಜಕೀಯ ನಾಯಕರು ಈ ವಿಚಾರದಲ್ಲಿ ಮೋದಿಗೆ ಸಾಟಿಯೇ ಅಲ್ಲ. ಮೋದಿ ಅವರ ನಾಯಕತ್ವ ಮತ್ತು ಮಾತುಗಾರಿಕೆ ಅನನ್ಯವಾದುದು’ ಎಂದು ಅವರು ಹೇಳಿದರು.

‘ಬ್ರಿಟನ್‌ನ ಪ್ರಧಾನಿ ಹುದ್ದೆಯಿಂದ ಇಳಿದ ನಂತರ ಡೇವಿಡ್ ಕ್ಯಾಮರೂನ್‌ ಅವರ ಜತೆ ಮಾತನಾಡಿದ್ದೆ. ನಿಮ್ಮ ಅಧಿಕಾರದ ಅವಧಿಯಲ್ಲಿ ನೀವು ಮಾಡಿದ ದೊಡ್ಡ ತಪ್ಪು ಯಾವುದು ಎಂದು ಅವರನ್ನು ಪ್ರಶ್ನಿಸಿದ್ದೆ. ಅವರು ಬ್ರೆಕ್ಸಿಟ್ ಅಥವಾ ಬೇರೆ ಯಾವುದಾದರೂ ವಿಚಾರವನ್ನು ಪ್ರಸ್ತಾಪಿಸಬಹುದು ಎಂದುಕೊಂಡಿದ್ದೆ. ಆದರೆ ಅವರು, ‘ಮೋದಿಯನ್ನು ವಿಂಬ್ಲೆ  ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿದ್ದೇ ನಾನು ಮಾಡಿದ ತಪ್ಪು. ಅಲ್ಲಿ ಮೋದಿ ಅವರು ಮಾತು ಆರಂಭಿಸುತ್ತಿದ್ದಂತೆಯೇ ನನ್ನ ದೇಶದಲ್ಲಿ ನಾನೇ ಪರಕೀಯ ಅನ್ನಿಸತೊಡಗಿತು’ ಎಂದು ಕ್ಯಾಮರೂನ್‌ ಹೇಳಿದ್ದರು’ ಎಂದು ಜೇಟ್ಲಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !