ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಮಾರಾಟಕ್ಕಿತ್ತು: ಪ್ರಧಾನಿ ಮೋದಿ

Last Updated 3 ಡಿಸೆಂಬರ್ 2019, 16:14 IST
ಅಕ್ಷರ ಗಾತ್ರ

ಜೆಮ್‌ಶೇಡ್‌ಪುರ:ಜಾರ್ಖಂಡ್‌ನಲ್ಲಿ ಐದು ವರ್ಷಗಳ ಹಿಂದೆ ಕಾಂಗ್ರೆಸ್‌–ಜೆಎಂಎಂ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದಾಗ ಬರೀ ಲೂಟಿ ಮತ್ತು ಭ್ರಷ್ಟಾಚಾರಗಳ ಬಗ್ಗೆ ವರದಿಯಾಗುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಜಾರ್ಖಂಡ್‌ ರಾಜಧಾನಿ ಜೆಮ್‌ಶೇಡ್‌ಪುರದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಕಾಂಗ್ರೆಸ್‌ ಹಾಗೂ ಜೆಎಂಎಂನ ನಾಯಕರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌–ಜೆಎಂಎಂ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರ್ಖಂಡ್‌ನ ಮುಖ್ಯಮಂತ್ರಿ ಕುರ್ಚಿಯು ಮಾರಾಟಕ್ಕಿತ್ತು. ರಾಜ್ಯವು ಕಳೆದ 10 ವರ್ಷಗಳಲ್ಲಿ 14 ಮುಖ್ಯಮಂತ್ರಿಗಳನ್ನು ಕಂಡಿದೆ. ಕಾಂಗ್ರೆಸ್‌ ಮತ್ತು ಜೆಎಂಎಂ ನಾಯಕರ ಸ್ವಹಿತಾಸಕ್ತಿ ರಾಜಕಾರಣವೇ ಇದಕ್ಕೆ ಕಾರಣ,’ ಎಂದು ಪ್ರಧಾನಿ ಟೀಕಿಸಿದರು. ‌

‘ಜೆಮ್‌ಶೇಡ್‌ಪುರವು ಲಕ್ಷಾಂತರ ಜನರಿಗೆ ಕೆಲಸ ಒದಗಿಸಿದ್ದು, ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ಕಾರಣವಾಗಿದೆ,’ ಎಂದರು.

ಮರ್ಯಾದಾ ಪುರುಷೋತ್ತಮನಾಗಿ ಮರಳಿದ ರಾಮ

ಜಾರ್ಖಂಡ್‌ನಲ್ಲಿ ಪ್ರಾಬಲ್ಯ ಹೊಂದಿರುವ ಕುಂತಿ ಬುಡಕಟ್ಟು ಜನಾಂಗ ಉದ್ದೇಶಿಸಿ ಮಾತನಾಡಿದ ಮೋದಿ,’ಅಯೋದ್ಯೆಯಲ್ಲಿ ರಾಮ ಮಂದಿರ ಸಮಸ್ಯೆಯನ್ನು ನಾವು ಶಾಂತಯುತವಾಗಿ ಬಗೆಹರಿಸಿದ ರೀತಿಯನ್ನು ನೀವು ನೋಡಿದ್ದೀರಿ. 14 ವರ್ಷಗಳ ವನವಾಸ ಮುಗಿಸಿ ಮರಳಿದ್ದ ರಾಮ ಮರ್ಯಾದಾ ಪುರುಷೋತ್ತಮನಾಗಿದ್ದ. ಕಾರಣ, ತೆರಳುವಾಗ ಅರಸನಾಗಿದ್ದ ರಾಮನು ಬುಡಕಟ್ಟು ಜನಾಂಗದೊಂದಿಗಿದ್ದು ಅವರ ಸಂಸ್ಕೃತಿ ಕಲಿತು ಮರಳಿದ್ದ,’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT