ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಸರ್ದಾರ್ ಪಟೇಲ್‌ 144ನೇ ಜನ್ಮದಿನಾಚರಣೆ: ಪ್ರಧಾನಿ ಮೋದಿ ಭಾಗಿ

Last Updated 30 ಅಕ್ಟೋಬರ್ 2019, 11:05 IST
ಅಕ್ಷರ ಗಾತ್ರ

ನವದೆಹಲಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 144ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗುಜರಾತ್‌ನ ಕೆವಡಿಯಾದಲ್ಲಿರುವ ‘ಏಕತಾ ಪ್ರತಿಮೆ’ಗೆ ಗೌರವ ಸಲ್ಲಿಸಲಿದ್ದಾರೆ.

‘ಏಕತಾ ದಿವಸ ಪಥಸಂಚಲನ’ದಲ್ಲಿ ಭಾಗವಹಿಸಲಿರುವ ಪ್ರಧಾನಿ ಬಳಿಕ ಕೆವಡಿಯಾದಲ್ಲಿ ನಾಗರಿಕ ಸೇವಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಜತೆ ಸಂವಹನ ನಡೆಸಲಿದ್ದಾರೆ’ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.

2014ರಿಂದಲೂ ಅಕ್ಟೋಬರ್ 31ರಂದು ‘ರಾಷ್ಟ್ರೀಯ ಏಕತಾ ದಿವಸ’ ಆಚರಿಸಲಾಗುತ್ತಿದ್ದು, ‘ಏಕತೆಗಾಗಿ ಓಟ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಈಚೆಗಷ್ಟೆ ಮೋದಿ ‘ಮನ್‌ ಕಿ ಬಾತ್’ ಕಾರ್ಯಕ್ರಮದಲ್ಲಿ ‘ಏಕತೆಗಾಗಿ ಓಟ’ ಪ್ರಸ್ತಾಪಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಕರೆ ನೀಡಿದ್ದರು.

ಗುಜರಾತ್‌ನ ಕೆವಡಿಯಾದಲ್ಲಿರುವ ‘ಏಕತಾ ಪ್ರತಿಮೆ’
ಗುಜರಾತ್‌ನ ಕೆವಡಿಯಾದಲ್ಲಿರುವ ‘ಏಕತಾ ಪ್ರತಿಮೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT