ಪ್ರಧಾನಿ ಮೋದಿ ರಾಷ್ಟ್ರೀಯ ಸಂಸ್ಥೆಗಳನ್ನು ನುಂಗುವ ‘ಅನಕೊಂಡ’: ಆಂಧ್ರ ಸಚಿವ ಟೀಕೆ

7
ಬಿಜೆಪಿಯಿಂದ ತೀವ್ರ ವಿರೋಧ

ಪ್ರಧಾನಿ ಮೋದಿ ರಾಷ್ಟ್ರೀಯ ಸಂಸ್ಥೆಗಳನ್ನು ನುಂಗುವ ‘ಅನಕೊಂಡ’: ಆಂಧ್ರ ಸಚಿವ ಟೀಕೆ

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ, ಆರ್‌ಬಿಐನಂತಹ ರಾಷ್ಟ್ರೀಯ ಸಂಸ್ಥೆಗಳನ್ನು ನುಂಗುತ್ತಿರುವ ‘ಅನಕೊಂಡ’ ಎಂದು ಆಂಧ್ರ ಪ್ರದೇಶದ ಹಣಕಾಸು ಸಚಿವ ಯನಮಲ ರಾಮಕೃಷ್ಣುಡು ಟೀಕಿಸಿದ್ದಾರೆ.

ಆಂಧ್ರದ ಪ್ರತಿಪಕ್ಷ ವೈಎಸ್‌ಆರ್ ಕಾಂಗ್ರೆಸ್ ಮತ್ತು ಜನ ಸೇನಾ ವಿರುದ್ಧವೂ ಅವರು ಕಿಡಿಕಾರಿದ್ದಾರೆ. ಈ ಎರಡೂ ಪಕ್ಷಗಳಿಗೆ ಅಧಿಕಾರದ ಆಸೆ ಬಿಟ್ಟರೆ ದೇಶದ ಕುರಿತು ಯಾವುದೇ ಜವಾಬ್ದಾರಿಯಿಲ್ಲ. ಉಭಯ ಪಕ್ಷಗಳು ಮೋದಿ ಅವರನ್ನು ಬೆಂಬಲಿಸುತ್ತಿವೆ. ಮೋದಿ ಅವರು ರಾಷ್ಟ್ರೀಯ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ತಿರುಗೇಟು: ಸಚಿವರ ಟೀಕೆಗೆ ಬಿಜೆಪಿ ತಿರುಗೇಟು ನೀಡಿದೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ‘ಭ್ರಷ್ಟಾಚಾರದ ರಾಜ’. ತಮ್ಮ ಹಗರಣಗಳು ಹೊರಬರುವ ಭೀತಿಯಲ್ಲಿದ್ದಾರೆ ಎಂದು ಬಿಜೆಪಿಯ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಕನ್ನಾ ಲಕ್ಷ್ಮೀನಾರಾಯಣ ಟೀಕಿಸಿದ್ದಾರೆ.

‘ಎಲ್ಲ ಭ್ರಷ್ಟ ನಾಯಕರು ಮತ್ತು ಚಂದ್ರಬಾಬು ಸೇರಿಕೊಂಡು ತಂಡವೊಂದನ್ನು ರಚಿಸಿದ್ದಾರೆ. ಆದರೆ ಅವರು ದೇಶವನ್ನು ಲೂಟಿ ಮಾಡಲು ಪ್ರಯತ್ನಿಸಿದರೆ ಅದು ಸಾಧ್ಯವಾಗಲಾರದು’ ಎಂದು ಲಕ್ಷ್ಮೀನಾರಾಯಣ ಹೇಳಿದ್ದಾರೆ. ಚಂದ್ರಬಾಬು ನಾಯ್ಡು ಅವರು ಈಚೆಗೆ ದೆಹಲಿಯಲ್ಲಿ ಪ್ರತಿಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !