25 ಲಕ್ಷ ಚೌಕೀದಾರರನ್ನು ಉದ್ದೇಶಿಸಿ ಇಂದು ಮೋದಿ ಮಾತು

ಬುಧವಾರ, ಏಪ್ರಿಲ್ 24, 2019
32 °C

25 ಲಕ್ಷ ಚೌಕೀದಾರರನ್ನು ಉದ್ದೇಶಿಸಿ ಇಂದು ಮೋದಿ ಮಾತು

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸುಮಾರು 25 ಲಕ್ಷ ಚೌಕೀದಾರರನ್ನು ಉದ್ದೇಶಿಸಿ ಬುಧವಾರ ಮಾತನಾಡಲಿದ್ದಾರೆ.

ದೇಶದ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಎಲ್ಲರೂ ಚೌಕಿದಾರ್‌ (ಕಾವಲುಗಾರ) ಆಗಬೇಕಿದೆ ಎಂದು ಕರೆ ನೀಡಿದ್ದ ಮೋದಿ, ಟ್ವಿಟರ್‌ನಲ್ಲಿ ‘ಮೈ ಭೀ ಚೌಕೀದಾರ್‌’ ಅಭಿಯಾನ ಆರಂಭಿಸಿದ್ದರು. ಇದಕ್ಕೆ ಪಕ್ಷದ ಸಚಿವರು, ನಾಯಕರು, ಕಾರ್ಯಕರ್ತರು, ಬೆಂಬಲ ಸೂಚಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ರಾಜ್ಯಸಭೆ ಸಂಸದ ಅನಿಲ್‌ ಬಲುನಿ, ಮೋದಿ ಅವರು ಚೌಕಿದಾರರನ್ನುದ್ದೇಶಿಸಿ ಬುಧವಾರ ಸಂಜೆ 4.30ಕ್ಕೆ ಆಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಲಿದ್ದು, ಹೋಳಿ ಹಬ್ಬದ ಶುಭಾಶಯವನ್ನೂ ತಿಳಿಸಲಿದ್ದಾರೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ, ದೇಶದ 500 ಸ್ಥಳಗಳಲ್ಲಿ ಅಭಿಯಾನಕ್ಕೆ ಬೆಂಬಲ ನೀಡಿರುವ ವ್ಯಕ್ತಿಗಳ ಜೊತೆ ಅವರು ಮಾರ್ಚ್‌ 31ರಂದು ವಿಡಿಯೊ ಸಂವಾದ ನಡೆಸಲಿದ್ದಾರೆ.

ಚೌಕೀದಾರ್‌ ಅಭಿಯಾನ ತೀವ್ರಗೊಳ್ಳುತ್ತಿದ್ದಂತೆ ಮೋದಿ ಅವರು ತಮ್ಮ ಟ್ವಿಟರ್‌ ಖಾತೆಯನ್ನು ಚೌಕೀದಾರ್‌ ನರೇಂದ್ರ ಮೋದಿ ಎಂದು ಬದಲಿಸಿಕೊಂಡಿದ್ದರು. ತಕ್ಷಣೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಖಾತೆಯೂ ಚೌಕೀದಾರ್‌ ಅಮಿತ್ ಶಾ ಆಗಿ ಬದಲಾಗಿತ್ತು.

ಮೋದಿ ಬೆಂಬಲಿಗರು, ಬಿಜೆಪಿ ಕೇಂದ್ರ ಸಚಿವರು, ಬಿಜೆಪಿ ನಾಯಕರು, ಕಾರ್ಯಕರ್ತರು ಟ್ವಿಟರ್‌ನಲ್ಲಿ ತಮ್ಮ ಹೆಸರಿನ ಮುಂದೆ ‘ಚೌಕೀದಾರ್‌’ ಎಂದು ಸೇರಿಸಿಕೊಂಡು ಅಭಿಯಾನಕ್ಕೆ ಸಾಥ್‌ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 23

  Happy
 • 5

  Amused
 • 1

  Sad
 • 0

  Frustrated
 • 10

  Angry

Comments:

0 comments

Write the first review for this !