ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬೂಟಾಟಿಕೆಯ ದಾಖಲೆ: ನರೇಂದ್ರ ಮೋದಿ

ಬುಧವಾರ, ಏಪ್ರಿಲ್ 24, 2019
31 °C

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬೂಟಾಟಿಕೆಯ ದಾಖಲೆ: ನರೇಂದ್ರ ಮೋದಿ

Published:
Updated:

ಪಸೀಫಾಟ್: 60 ವರ್ಷಗಳ ಕಾಲ ಆಡಳಿತ ನಡೆಸಿದ ಸರ್ಕಾರ ಜನರಿಗಾಗಿ ಏನೂ ಮಾಡಿಲ್ಲ. ಆದರೆ ನಾನು ಬರೀ 60 ತಿಂಗಳು ಆಡಳಿತ ನಡೆಸಿದೆ. ಅದನ್ನು ನೀವೇ ನೋಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಅರುಣಾಚಲ ಪ್ರದೇಶದ ಪಸೀಘಾಟ್‍ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆ ಬಗ್ಗೆ ಟೀಕೆ ಮಾಡಿದ್ದಾರೆ.

ಅದು ಚುನಾವಣಾ ಪ್ರಣಾಳಿಕೆ ಅಲ್ಲ, ಅದು ಭ್ರಷ್ಟ ಮತ್ತು ಕಣ್ಣೊರೆಸುವ ತಂತ್ರ. 2009ರ ವೇಳೆಗೆ ಎಲ್ಲ ಮನೆಗಳಿಗೆ ವಿದ್ಯುತ್ ನೀಡುತ್ತೇವೆ ಎಂದು 2004ರ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ 2014ರ ವರೆಗೆ ಕಾಂಗ್ರೆಸ್ ಪಕ್ಷದಂತೆ 18,000 ಮನೆಗಳಿಗೆ ವಿದ್ಯುತ್ ಇರಲಿಲ್ಲ. ಅವರ ಪ್ರಣಾಳಿಕೆಯೇ ಭ್ರಷ್ಟಾಚಾರದಿಂದ ಕೂಡಿದ್ದು, ಸುಳ್ಳುಗಳ ಸರಮಾಲೆ ಆಗಿದೆ. ಹಾಗಾಗಿ ಅದನ್ನು ಬೂಟಾಟಿಕೆಯ ದಾಖಲೆ ಎಂದು ಹೇಳಬಹುದೇ ಹೊರತು ಚುನಾವಣಾ ಪ್ರಣಾಳಿಕೆ ಎಂದು ಹೇಳುವಂತಿಲ್ಲ ಅಂದಿದ್ದಾರೆ

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 0

  Frustrated
 • 6

  Angry

Comments:

0 comments

Write the first review for this !