ಐಐಟಿ ಎಂದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಲ್ಲ ಭಾರತದ ಪರಿವರ್ತನೆಯ ಉಪಕರಣ: ಮೋದಿ

7

ಐಐಟಿ ಎಂದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಲ್ಲ ಭಾರತದ ಪರಿವರ್ತನೆಯ ಉಪಕರಣ: ಮೋದಿ

Published:
Updated:

ನವದೆಹಲಿ: ಶನಿವಾರ ಐಐಟಿ ಬಾಂಬೆಯ 56ನೇ ಘಟಿಕೋತ್ಸವದಲ್ಲಿ ಭಾಗಿಯಾಗಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಐಐಟಿ ಎಂದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಲ್ಲ ಭಾರತದ ಪರಿವರ್ತನೆಯ ಉಪಕರಣ ಎಂದು ಹೇಳಿದ್ದಾರೆ.

ಉತ್ತಮವಾದ ಯೋಚನೆಗಳು ಸರ್ಕಾರಿ ಕಟ್ಟಡಗಳಲ್ಲಿ ಅಥವಾ ಅಲಂಕಾರಿಕ ಕಚೇರಿಗಳಲ್ಲಿ ಹುಟ್ಟುವುದಿಲ್ಲ. , ಇಂಥಾ ಯೋಚನೆಗಳೆಲ್ಲವೂ ಹುಟ್ಟುವುದು ಐಐಟಿ-ಬಿಯಂಥಾ ಕ್ಯಾಂಪಸ್‍ಗಳಲ್ಲಿ, ಇಂಥಾ ಯುವ ಜನರ ಮನಸ್ಸುಗಳಲ್ಲಿ ಎಂದಿದ್ದಾರೆ ಮೋದಿ.

 ಹೊಸಶೋಧ ಮತ್ತು ಉದ್ಯಮಶೀಲತೆ ದೇಶದ ಆರ್ಥಿಕ ಅಭಿವೃದ್ದಿಗೆ ಇರುವ ಅಡಿಪಾ.  ಉತ್ತಮ ತಂತ್ರಜ್ಞಾನವು ದೇಶದ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಹೊಸ ಶೋಧ ಎಂಬುದು 21ನೇ ಶತಮಾನದ ಜನಪ್ರಿಯ ಪದವಾಗಿದೆ

ಹೊಸಶೋಧ ನಡೆಯದೇ ಇದ್ದರೆ ಯಾವುದೇ ಸಮಾಜ ಅಭಿವೃದ್ಧಿ ಹೊಂದುವುದಿಲ್ಲ. ಭಾರತವೀಗ ಸ್ಟಾರ್ಟ್ ಅಪ್‍ಗಳ ತಾಣವಾಗಿ ಅಭಿವೃದ್ಧಿ ಹೊಂದುತ್ತಿದ್ದು ಹೊಸಶೋಧದೆಡೆಗಿನ ತುಡಿತ ಕಾಣಿಸುತ್ತಿದೆ. ನಾವೀಗ ಭಾರತವನ್ನು ಹೊಸಶೋಧ ಮತ್ತು ಉದ್ಯಮಶೀಲತೆಯ ತಾಣವನ್ನಾಗಿ ಮಾಡಬೇಕು.

ಅದೇ ವೇಳೆ ಹವಾಮಾನ ವೈಪರೀತ್ಯವನ್ನು ನಿಯಂತ್ರಿಸುವ, ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ, ಸ್ವಚ್ಛಂದವಾದ ಗಾಳಿ, ನೀರಿನ ಸಂರಕ್ಷಣೆ, ಅಪೌಷ್ಟಿಕತೆ ಮತ್ತು ತ್ಯಾಜ್ಯ ಸಂಸ್ಕರಣೆ ಬಗ್ಗೆ ಹೊಸಶೋಧಗಳನ್ನು ನಡೆಸಬೇಕು ಎಂದು ಮೋದಿ ಐಐಟಿ ಪದವೀಧರರಿಗೆ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !