ಮಂಗಳವಾರ, ಜನವರಿ 21, 2020
20 °C

ಪೌರತ್ವ ಮಸೂದೆ ಬಗ್ಗೆ ಕಾಂಗ್ರೆಸ್ ಪಕ್ಷ ಜನರ ಹಾದಿ ತಪ್ಪಿಸುತ್ತಿದೆ: ನರೇಂದ್ರ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

narendra modi

ಧನಬಾದ್: ಪೌರತ್ವ ತಿದ್ದುಪಡಿ ಮಸೂದೆಯು ಈಶಾನ್ಯ ರಾಜ್ಯಗಳ ಜನರ ಸಂಸ್ಕೃತಿ ಮತ್ತು ಭಾಷೆಯನ್ನು ಕಾಪಾಡುತ್ತದೆ. ಪೌರತ್ವ ತಿದ್ದುಪಡಿ ಮಸೂದೆಗೆ ಅಂಗೀಕಾರವಾಗಿರುವುದರ ಬಗ್ಗೆ  ಅಸ್ಸಾಂನ ಸಹೋದರ, ಸಹೋದರಿಯರು ಚಿಂತೆ ಮಾಡಬೇಡಿ. ನಿಮ್ಮ ಹಕ್ಕು, ಅಸ್ಮಿತೆ  ಮತ್ತು ಸುಂದರವಾದ ಸಂಸ್ಕೃತಿಯನ್ನು ಯಾರೂ ದೋಚುವುದಿಲ್ಲ. ಇಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಗುರುವಾರ  ಜಾರ್ಖಂಡ್‌ನ  ಧನಬಾದ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾದರೆ ಬಾಂಗ್ಲಾದೇಶದವರು ಅಸ್ಸಾಂನಲ್ಲಿ ನೆಲೆಯೂರುತ್ತಾರೆ. ಇದರಿಂದಾಗಿ ಅಸ್ಸಾಂನಲ್ಲಿರುವ ಜನರು ಅಲ್ಪಸಂಖ್ಯಾತರಾಗಿ ಬಿಡುತ್ತಾರೆ ಎಂದು ಕಾಂಗ್ರೆಸ್ ಪಕ್ಷ ಜನರನ್ನು ತಪ್ಪು ಹಾದಿಗೆಳೆಯುತ್ತಿದೆ.  ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಲಿದೆ ಎಂದಿದ್ದಾರೆ.

ರಾಮಜನ್ಮಭೂಮಿ ವಿವಾದವು ದಶಕಗಳ ಕಾಲ ತೀರ್ಪಾಗದಂತೆ  ಕಾಂಗ್ರೆಸ್ ಪಕ್ಷ ನೋಡಿಕೊಂಡಿತು.  ದೇಶದ ಹಿತಾಸಕ್ತಿ ಅವರಿಗೆ ಮುಖ್ಯವಲ್ಲ. ದೇಶದಲ್ಲಿ ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಕಠಿಣ ನಿರ್ಧಾರಗಳನ್ನು ಅವರು ಕೈಗೊಂಡಿಲ್ಲ.

ಇದನ್ನೂ ಓದಿ: ಸುಪ್ರೀಂಕೋರ್ಟ್‌ನಲ್ಲಿ ಪೌರತ್ವ ಕಾಯ್ದೆ ಪ್ರಶ್ನಿಸಲು ಮುಸ್ಲಿಂ ಸಂಘಟನೆ ಸಿದ್ಧತೆ

ಜನರಿಗೆ ನೀಡಿದ ಭರವಸೆಯನ್ನು  ಬಿಜೆಪಿ ಪೂರೈಸುತ್ತದೆ. ಹಾಗಾಗಿ ಜನರು ನಮ್ಮ ಮೇಲೆ ನಂಬಿಕೆಯಿಟ್ಟಿದ್ದಾರೆ.  ಕೇಂದ್ರ ಸರ್ಕಾರದ ಜಲ್ -ಜೀವನ್ ಯೋಜನೆ ಮೂಲಕ ನೀರಿನ ಸಮಸ್ಯೆಯನ್ನು ನಾವು ಪರಿಹರಿಸುತ್ತೇವೆ ಎಂದು ಮೋದಿ ಜನರಿಗೆ ಆಶ್ವಾಸನೆ ನೀಡಿದ್ದಾರೆ . 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು