ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನಂದನ್ ಎಂಬ ಪದಕ್ಕೆ ಹೊಸ ಅರ್ಥ ಸಿಗಲಿದೆ: ನರೇಂದ್ರ ಮೋದಿ 

Last Updated 2 ಮಾರ್ಚ್ 2019, 7:23 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಏನೇ ಮಾಡಿದರೂ ಜಗತ್ತು ನಮ್ಮನ್ನು ಬಹಳ ಗಮನವಿಟ್ಟು ನೋಡುತ್ತದೆ. ಭಾರತಕ್ಕೆ ನಿಘಂಟಿನಲ್ಲಿರುವ ಪದದ ಅರ್ಥವನ್ನೇ ಬದಲಿಸುವ ತಾಕತ್ತು ಇದೆ.ಈ ಹಿಂದೆ ಅಭಿನಂದನ್ ಎಂಬ ಸಂಸ್ಕೃತ ಪದದ ಅರ್ಥ Congratulations ಎಂದಾಗಿತ್ತು.ಇನ್ನು ಅಭಿನಂದನ್ ಎಂಬ ಪದಕ್ಕೆ ಹೊಸ ಅರ್ಥ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶನಿವಾರ ನವದೆಹಲಿಯವಿಗ್ಯಾನ್ ಭವನದಲ್ಲಿ ನಿರ್ಮಾಣ ತಂತ್ರಜ್ಞಾನ ಸಮಾವೇಶ (Construction Technology India 2019) ಉದ್ಘಾಟಿಸಿ ಭಾಷಣ ಮಾಡಿದ ಮೋದಿ ತಮ್ಮ ಅಧಿಕಾರವಧಿಯಲ್ಲಿ ಈಗಾಗಲೇ 1.3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ.ಕಳೆದ ಸರ್ಕಾರ ಕೇವಲ 25 ಲಕ್ಷ ಮನೆಗಳನ್ನು ನಿರ್ಮಿಸಿತ್ತು.ಈ ಸಂಖ್ಯೆಗಳೇ ಎಲ್ಲವನ್ನೂ ಹೇಳುತ್ತದೆ ಎಂದಿದ್ದಾರೆ.

ಹೂಡಿಕೆಯ ಜತೆಗೆ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಗೃಹ ನಿರ್ಮಾಣ ವಲಯ ಮತ್ತು ರಿಯಲ್ ಎಸ್ಟೇಟ್ ವಲಯಕ್ಕೆ ಕೂಡಾ ಕಾನೂನು ಸಹಾಯ ಸಿಗಲು ನಾವು ಶ್ರಮಿಸತ್ತಿದ್ದೇವೆ. ರೇರಾದಿಂದ ಈ ವಲಯಕ್ಕೆ ಇದರಿಂದ ಪಾರದರ್ಶಕತೆ ಸಿಕ್ಕಿದೆ. ಇನ್ನೂ ಮಾಡಬೇಕಾದ ಕೆಲಸಗಳು ಸಾಕಷ್ಟು ಇವೆ.ಅದಕ್ಕಾಗಿ ಖಾಸಗಿ ವಲಯಗಳ ಸಹಾಯ ಬೇಕಿದೆ. ನಾವು ಜತೆಯಾಗಿ ಕೆಲಸ ಮಾಡುವ ಮೂಲಕ ಕಡು ಬಡವರಿಗೂ ಸಹಾಯವಾಗುವಂತೆ ಮಾಡೋಣ. ಮನೆಗೆ ನೀರು, ವಿದ್ಯುತ್, ಉಜ್ವಲ ಸೇರಿದಂತೆ ಇತರ ಸೌಲಭ್ಯಗಳೂ ಸಿಗಬೇಕು. ಕಳೆದ ನಾಲ್ಕು ವರ್ಷಗಳಲ್ಲಿ ಮನೆಯ ಗುಣಮಟ್ಟ ಕೂಡಾ ಉತ್ತಮವಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT