ಶನಿವಾರ, ಏಪ್ರಿಲ್ 4, 2020
19 °C

ಪ್ರಧಾನಿ ಮೋದಿ, ಸಚಿವರ ನಡುವೆ ಅಂತರ: ಸಂಪುಟ ಸಭೆಯಲ್ಲಿಯೂ ಸೋಷಿಯಲ್ ಡಿಸ್ಟೆನ್ಸ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಇಡೀ ದೇಶದಲ್ಲಿ 21 ದಿನ ಲಾಕ್‌ಡೌನ್ ಘೋಷಿಸಿದ ನಂತರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವರು ಅಂತರ ಕಾಯ್ದುಕೊಂಡದ್ದು ಕಂಡುಬಂತು.

ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡದಂತೆ ತಡೆಯುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ (ಸೋಷಿಯಲ್ ಡಿಸ್ಟೆನ್ಸಿಂಗ್) ಮೋದಿಯವರು ದೇಶದ ಜನತೆಗೆ ಕರೆ ನೀಡಿದ್ದರು. ಜತೆಗೆ ಮಂಗಳವಾರ ರಾತ್ರಿಯಷ್ಟೇ 21 ದಿನ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದರು. ಇದಾದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮತ್ತು ಸಚಿವರು ದೂರ ಕುಳಿತುಕೊಂಡಿದ್ದಾರೆ.

ಇದನ್ನೂ ಓದಿ: 

ಪ್ರಧಾನಿಯವರು ಕುಳಿತ ಕುರ್ಚಿಗೆ ಎದುರಾಗಿ ದೂರದಲ್ಲಿ ಇಟ್ಟಿರುವ ಕುರ್ಚಿಗಳಲ್ಲಿ ದಾಖಲೆಗಳೊಂದಿಗೆ ಇತರ ಸಚಿವರು ಕುಳಿತಿರುವುದು ಚಿತ್ರದಲ್ಲಿ ಕಂಡುಬಂದಿದೆ.

ಸಾಮಾನ್ಯವಾಗಿ, ಸಂಪುಟ ಸಭೆಗಳಲ್ಲಿ ಪ್ರಧಾನಿಯವರ ಸುತ್ತ ಸನಿಹದಲ್ಲೇ ಇತರ ಸಚಿವರು ಕುಳಿತುಕೊಳ್ಳುತ್ತಾರೆ. ಆದರೀಗ ಅವರೂ ಅಂತರ ಕಾಯ್ದುಕೊಂಡಿದ್ದಾರೆ.

‘ಸಾಮಾಜಿಕ ಅಂತರವು ಸದ್ಯದ ಅವಶ್ಯಕತೆಯಾಗಿದೆ. ನಾವದನ್ನು ಖಾತ್ರಿಗೊಳಿಸುತ್ತಿದ್ದೇವೆ... ನೀವು? ಗೌರವಾನ್ವಿತ ಪ್ರಧಾನಿಯವರ ನೇತೃತ್ವದಲ್ಲಿ ನಡೆದ ಇಂದಿನ ಸಚಿವ ಸಂಪುಟ ಸಭೆಯ ಚಿತ್ರವಿದು’ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು