ಪ್ರಧಾನಿ ಹುದ್ದೆಗೆ ಸ್ಪರ್ಧಿ ಅಲ್ಲ: ಗಡ್ಕರಿ

ಭಾನುವಾರ, ಮಾರ್ಚ್ 24, 2019
31 °C

ಪ್ರಧಾನಿ ಹುದ್ದೆಗೆ ಸ್ಪರ್ಧಿ ಅಲ್ಲ: ಗಡ್ಕರಿ

Published:
Updated:
Prajavani

ನವದೆಹಲಿ: ‘ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ನಾನಿಲ್ಲ’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

‘ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮೋದಿ ಅವರ ಬೆನ್ನಿಗೆ ನಾವಿದ್ದೇವೆ. ಹೀಗಾಗಿ, ನಾನು ಪ್ರಧಾನಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’  ಎಂದು ಹೇಳಿದ್ದಾರೆ.

‘ನಾನು ಪರಿಶುದ್ಧ ಆರ್‌ಎಸ್‌ಎಸ್‌ ವ್ಯಕ್ತಿ. ನನಗೆ ದೇಶವೇ ಸರ್ವೋಚ್ಛ. ದೇಶಕ್ಕಾಗಿ ದುಡಿಯುವುದು ನನ್ನ ಕರ್ತವ್ಯ’ ಎಂದು ಶುಕ್ರವಾರ ರಸ್ತೆ ಯೋಜನೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಚುನಾವಣೆ ಬಳಿಕ ಅತಂತ್ರ ಪರಿಸ್ಥಿತಿ ಸೃಷ್ಟಿಯಾದರೆ ಗಡ್ಕರಿ ಅವರನ್ನು ಸರ್ವಾನುಮತದಿಂದ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಗುತ್ತಿದೆ ಎನ್ನುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದು ಹಗಲುಗನಸು. ಪ್ರಧಾನಿ ಹುದ್ದೆ ಬಗ್ಗೆ ನಾನು ಕನಸು ಕಂಡಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !