ಮೋದಿ ಇ–ಮೇಲ್‌ ಸಂದರ್ಶನದ ಅಡ್ಡಹಾದಿ ಹಿಡಿದಿದ್ದಾರೆ: ಶಿವಸೇನಾ

7
‘ಸಾಮ್ನಾ’ದ ಸಂಪಾದಕೀಯ ವ್ಯಂಗ್ಯ

ಮೋದಿ ಇ–ಮೇಲ್‌ ಸಂದರ್ಶನದ ಅಡ್ಡಹಾದಿ ಹಿಡಿದಿದ್ದಾರೆ: ಶಿವಸೇನಾ

Published:
Updated:

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಲು ‘ಇ–ಮೇಲ್‌ಗಳ ಅಡ್ಡಹಾದಿ’ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಶಿವಸೇನಾ ಆರೋಪಿಸಿದೆ. 

‘ಇ–ಮೇಲ್‌ಗಳ ಮೂಲಕವೇ ಸಂದರ್ಶನ ನೀಡುವುದನ್ನು ಪ್ರಧಾನಿ ಮುಂದುವರಿಸಿದರೆ ಪತ್ರಕರ್ತರು ಶೀಘ್ರವೇ ತಮ್ಮ ಉದ್ಯೋಗ ಕಳೆದುಕೊಳ್ಳುತ್ತಾರೆ. ನಂತರ ಪತ್ರಕರ್ತರಿಗೆ ಉದ್ಯೋಗ ದೊರಕಿಸಿಕೊಡುವ ಹೊಣೆ ಅವರದೇ ಆಗಿರುತ್ತದೆ’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ವ್ಯಂಗ್ಯವಾಡಿದೆ.

‘ಜನರ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಮುಖಾಮುಖಿ ಸಂದರ್ಶನಗಳಲ್ಲಿ ಪ್ರಧಾನಿ ಉತ್ತರ ನೀಡಬೇಕು’ ಎಂದು ಶಿವಸೇನಾ ಆಗ್ರಹಿಸಿದೆ.

‘ಮೋದಿ ಪ್ರಧಾನಿಯಾದ ಬಳಿಕ ಯಾವುದೇ ಪತ್ರಿಕಾಗೋಷ್ಠಿ ನಡೆಸಿಲ್ಲ. ಇದು ಅವರ ವ್ಯಕ್ತಿತ್ವಕ್ಕೆ ಯೋಗ್ಯವಾದುದಲ್ಲ. ಏಕೆಂದರೆ, 2014ರ ಲೋಕಸಭಾ ಚುನಾವಣೆಯವರೆಗೆ ಮೋದಿ ಪತ್ರಕರ್ತರ ಸ್ನೇಹಿತರಾಗಿದ್ದರು. ನಂತರ ಅವರು ತಮ್ಮ ಸುತ್ತ ಪಂಜರವೊಂದನ್ನು ಸೃಷ್ಟಿಸಿಕೊಂಡಿದ್ದಾರೆ’ ಎಂದು ಹೇಳಿದೆ. 

ರೇಡಿಯೊದಲ್ಲಿ ತಿಂಗಳಿಗೊಮ್ಮೆ ಪ್ರಸಾರವಾಗುವ ಪ್ರಧಾನಿಯವರ ‘ಮನ್‌ ಕೀ ಬಾತ್‌’ ಕಾರ್ಯಕ್ರಮವನ್ನು ಪ್ರಸ್ತಾಪಿಸಿರುವ ಪಕ್ಷ, ಈ ಮೂಲಕ ಪ್ರಧಾನಿ ಏನನ್ನಾದರೂ ಹೇಳುತ್ತಾರೆ; ಮಾಧ್ಯಮಗಳು ಅವನ್ನೆಲ್ಲ ಪ್ರಕಟಿಸುತ್ತವೆ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !