ಗುರುವಾರ , ಸೆಪ್ಟೆಂಬರ್ 19, 2019
29 °C
ದಿಟ್ಟ ಜಾಗತಿಕ ಕ್ರಮಕ್ಕೆ ಕರೆ

ಪಾಕ್‌ಗೆ ಮತ್ತೆ ಏಟು ಕೊಡಲು ಸಿದ್ಧ: ಸ್ಪಷ್ಟ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

Published:
Updated:
Prajavani

ಲಖನೌ: ‘ಭಯೋತ್ಪಾದನೆಯ ಬೇರುಗಳು ನೆರೆಯ ಪಾಕಿಸ್ತಾನದ ನೆಲದಲ್ಲಿ ಆಳವಾಗಿ ಊರಿವೆ’ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಉಗ್ರವಾದದ ಸವಾಲುಗಳನ್ನು ಎದುರಿಸಲು ಭಾರತ ಸಮರ್ಥವಾಗಿದೆ ಎಂದರು. 

‘ಭಾರತ ತನ್ನ ಸಾಮರ್ಥ್ಯವನ್ನು ಈಗಾಗಲೇ ತೋರಿಸಿಕೊಟ್ಟಿದೆ. ಮುಂದೆಯೂ ಇದನ್ನು ಮಾಡಿ ತೋರಿಸಲಿದೆ’ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿದರು. 

ಭಯೋತ್ಪಾದನೆ ಸಿದ್ಧಾಂತವನ್ನು ಪ್ರಾಯೋಜಿಸುತ್ತಿರುವವರ ವಿರುದ್ಧ ಜಾಗತಿಕ ಮಟ್ಟದಲ್ಲಿ ಪ್ರಬಲ ಕಾರ್ಯಾ ಚರಣೆಗೆ ಅವರು ಕರೆ ನೀಡಿದರು. ‘ಭಯೋತ್ಪಾದನೆಗೆ ಆಶ್ರಯ ನೀಡಿ, ಉಗ್ರರಿಗೆ ತರಬೇತಿ ಕೊಡುತ್ತಿರುವವರ ವಿರುದ್ಧ ಇಡೀ ಜಗತ್ತು ಸ್ಪಷ್ಟ ನಿರ್ಣಯ ತೆಗೆದುಕೊಳ್ಳುವ ಅಗತ್ಯವಿದೆ’ ಎಂದು ಅವರು ಒತ್ತಿ ಹೇಳಿದರು. 

ಈ ನಿಟ್ಟಿನಲ್ಲಿ ಕಠಿಣವಾದ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಾಗುವಂತೆ ‘ಅಕ್ರಮ ಚಟುವ ಟಿಕೆ ತಡೆ ಕಾಯ್ದೆ’ಗೆ ಸರ್ಕಾರ ತಿದ್ದು ಪಡಿ ತಂದಿದೆ. ಇನ್ನುಮುಂದೆ ಉಗ್ರರು ತಮ್ಮ ಸಂಘಟನೆಗಳ ಹೆಸರನ್ನು ಬದಲಾಯಿಸಿಕೊಂಡು ಅವಿತು ಕೊಂಡಿರಲು ಸಾಧ್ಯವಿಲ್ಲ ಎಂದರು. 

ಒಮ್ಮೆ ಬಳಸುವ ಪ್ಲಾಸ್ಟಿಕ್‌ ಬೇಡ: ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ಉಪ ಯೋಗವನ್ನು ನಿಲ್ಲಿಸುವಂತೆ ಪ್ರಧಾನಿ ಜನರಲ್ಲಿ ಮತ್ತೆ ಮನವಿ ಮಾಡಿದರು. ‘ವ್ಯಾಪಕ ಪ್ರಮಾಣದಲ್ಲಿ ಬಳಸುವ ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಜಾನುವಾರುಗಳು ಹಾಗೂ ಮೀನುಗಳ ಸಾವಿಗೂ ಕಾರಣವಾಗುತ್ತದೆ’ ಎಂದು ಅವರು ಎಚ್ಚರಿಸಿದರು. 

‘ಮುಂದಿನ ಜನಾಂಗಕ್ಕೆ ಒಳಿತಾಬೇಕಾದರೆ, ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್‌ ಬಳಕೆಯನ್ನು ಅಕ್ಟೋಬರ್ 2ರ ಬಳಿಕ ಸಂಪೂರ್ಣವಾಗಿ ಕೈಬಿಡಬೇಕು’ ಎಂದು ಅವರು ಮನವಿ ಮಾಡಿದರು. ಈ ಅಭಿಯಾನದಲ್ಲಿ ಕೈಜೋಡಿಸುವಂತೆ ಅವರು ಜನರಲ್ಲಿ ಮನವಿ ಮಾಡಿದರು. 

ಜೈರಾಮ್ ರಮೇಶ್ ಎಚ್ಚರಿಕೆ:  ಒಂದು ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್ ಮೇಲೆ ಸಂಪೂರ್ಣ ನಿಷೇಧ ಹೇರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. 

ಪ್ಲಾಸ್ಟಿಕ್ ಉದ್ಯಮದಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದು, ಈ ನಿರ್ಧಾರದಿಂದ ಅವರೆಲ್ಲರೂ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಎಚ್ಚರಿಸಿದ್ದಾರೆ. 

‘ಓಂ’, ‘ಗೋವು’ ಪದಗಳು ಕೆಲವರಿಗೆ ಹಿಡಿಸುವುದಿಲ್ಲ: ಮೋದಿ

‘ಓಂ’ ಹಾಗೂ ‘ಗೋವು’ ಶಬ್ದಗಳು ಹಿಂದುಳಿದಿರುವಿಕೆಯನ್ನು ಸಂಕೇತಿಸುತ್ತದೆ ಎಂದು ಭಾವಿಸಿರುವ ಕೆಲವರು ಜನರು ಈ ಪದಗಳನ್ನು ಕೇಳಲು ಇಷ್ಟಪಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

ಉತ್ತರ ಪ್ರದೇಶದ ಮಥುರಾದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೋವುಗಳ ಪ್ರಾಮುಖ್ಯತೆಯನ್ನು ವಿವರಿಸಿದರು. 

‘ಕೆಲವು ಜನರಿದ್ದಾರೆ. ಗೋವು ಪದ ಹಿಂದುಳಿದಿರುವಿಕೆ ಎಂದು ಅವರು ತಿಳಿದಿದ್ದಾರೆ. ಓಂ ಹಾಗೂ ಗೋವು ಶಬ್ದಗಳು ಕಿವಿಗೆ ಬಿದ್ದರೆ, ವಿದ್ಯುದಾಘಾತ ಆದಂತೆ ಅವರಿಗೆ ಭಾಸವಾಗುತ್ತದೆ. ನಾವು ಈ ಶಬ್ದಗಳನ್ನು ಬಳಸಿದ ಕೂಡಲೇ, ದೇಶ ಹಾಳಾಯಿತು ಎಂದು ಈ ಜನರು ಮಾತಾಡಲು ಶುರು ಮಾಡುತ್ತಾರೆ’ ಎಂದು ಪ್ರಧಾನಿ ಹೇಳಿದರು. 

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಿದರು. ದನಗಳು, ಕುರಿ, ಮೇಕೆ, ಹಂದಿಗಳಿಗೆ ಲಸಿಕೆ ಹಾಕಲಾಗುತ್ತದೆ. ಜಾನುವಾರುಗಳಿಂದ ಮನುಷ್ಯರಿಗೆ ಹರಡುವ ಬ್ರುಸೆಲ್ಲೊಸಿಸ್ ಸೋಂಕನ್ನು ಕಡಿಮೆ ಮಾಡುವುದು ಕಾರ್ಯಕ್ರಮದ ಉದ್ದೇಶ. 2030ವೇಳೆಗೆ ಸೋಂಕನ್ನು ಸಂಪೂರ್ಣವಾಗಿ ತೊಡದುಹಾಕುವ ಗುರಿ ಹಾಕಿಕೊಳ್ಳಲಾಗಿದೆ. 

Post Comments (+)